ಮೈಸೂರು: ಶಿವಾರ್ಚಕರ ಸಂಘ ಸಂಸ್ಥೆಗಳಲ್ಲಿ ಸಮನ್ವಯತೆ ಸಾಧಿಸುವ ಉದ್ದೇಶದಿಂದ ಸುವರ್ಣ ಕರ್ನಾಟಕ ಶಿವಾರ್ಚಕ ಪ್ರಗತಿಪರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಫೆ.10ರಂದು ಚಾಲನೆ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಬನ್ನೂರು ನಾಗರಾಜು ತಿಳಿಸಿದರು.
ಶಿವಾರ್ಚಕರ ಅಭಿವೃದ್ಧಿಯು ಸಂಘದ ಉದ್ದೇಶವಾಗಿದೆ. ಸಮುದಾಯಕ್ಕಾಗಿ ಅನೇಕ ಕೆಲಸ ಕಾರ್ಯ ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ. ಅಂದಿನ ಸಮಾರಂಭದಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನ, ವೀರಗಾಸೆ ಕಲಾವಿದರು, ವೈದ್ಯರು ಮೊದಲಾದವರಿಗೆ ಗೌರವ ಸಲ್ಲಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಸಿದ್ದರಾಜು, ಗುರುಸ್ವಾಮಿ, ನವೀನ್ ಸುತ್ತೂರು, ಗಣೇಶ್ ಕುಪ್ಯ ಇತರರು ಇದ್ದರು.