

ಧಾರವಾಡ: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2024ನೇ ಸಾಲಿನ ಗೌರವ ಪ್ರಶಸ್ತಿ, `ಸಾಹಿತ್ಯಶ್ರೀ' ಪ್ರಶಸ್ತಿ ಹಾಗೂ 2023ನೇ ಸಾಲಿನ ಪುಸ್ತಕ ಬಹುಮಾನ ಪ್ರಕಟಿಸಿದೆ. ಧಾರವಾಡದ ಹಿರಿಯ ಲೇಖಕ ಹಾಗೂ ಗ್ರಾಮೀಣಾಭಿವೃದ್ಧಿ ತಜ್ಞ ಡಾ. ಪ್ರಕಾಶ ಭಟ್ ಅವರ `ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ' ಮಾನವಿಕ ಸಾಹಿತ್ಯ ಪ್ರಕಾರದ ಕೃತಿ ಪುಸ್ತಕ ಬಹುಮಾನಕ್ಕೆ ಭಾಜನವಾಗಿದೆ. 2023ರಲ್ಲಿ ಪ್ರಕಟವಾದ 17 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿ ಎಂದು ಆಯ್ಕೆಯಾಗಿದೆ. ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು, ಫಲಕ ಮತ್ತು ಪ್ರಮಾಣಪತ್ರ ಒಳಗೊಂಡಿದೆ.