

ಬೆಂಗಳೂರು: 2018 ಹಾಗೂ 2019ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಶುಕ್ರವಾರ ಪ್ರಕಟಿಸಿದೆ. 2019ನೇ ಸಾಲಿನ ಗೌರವ ದತ್ತಿ ಪ್ರಶಸ್ತಿಯನ್ನು ಕೆ.ಜಿ. ನಾಗರಾಜಪ್ಪ, ಬಾಬು ಕೃಷ್ಣಮೂರ್ತಿ, ಉಷಾ ಪಿ. ರೈ, ಲಕ್ಷ್ಮಣ ತೆಲಗಾವಿ, ಡಾ. ವೀರಣ್ಣ ರಾಜೂರ ಅವರಿಗೆ ನೀಡಲಾಗಿದೆ.
2019ನೇ ಸಾಲಿನ ಸಾಹಿತ್ಯ ಪ್ರಶಸ್ತಿಯನ್ನು ಡಾ. ಅಮರೇಶ ನುಗಡೋಣಿ, ಡಾ. ವಿ.ಎಸ್.ಮಾಳಿ, ಸುಬ್ಬು ಹೊಲೆಯಾರ್, ಡಾ. ಶಾರದಾ ಕುಪ್ಪಂ, ಪಿ. ಶಿವಣ್ಣ, ಡಾ. ಎಂ.ಎಸ್. ವೇದಾ, ಎಫ್.ಟಿ. ಹಳ್ಳಿಕೇರಿ, ಡಾ. ಮಾಧವ ಪೆರಾಜೆ, ವಸುಧೇಂದ್ರ, ಡಾ. ಜಿ. ಪ್ರಶಾಂತ ನಾಯಕ ಅವರಿಗೆ ನೀಡಲಾಗಿದೆ.
10 ಜನರಿಗೆ 2019ನೇ ಸಾಲಿನ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ, 2018ರ ವರ್ಷದ ಪುಸ್ತಕ ಬಹುಮಾನ ಮತ್ತು 2018ರ ವರ್ಷದ ಅಕಾಡೆಮಿಯ 9 ದತ್ತಿನಿಧಿ ಬಹುಮಾನ ಘೊಷಿಸಲಾಗಿದೆ. ಕಾ.ತ. ಚಿಕ್ಕಣ್ಣ, ಜಿ.ಕೆ. ರವೀಂದ್ರಕುಮಾರ್, ಎಸ್.ಆರ್. ವಿಜಯಶಂಕರ್ ಸೇರಿ 19 ಮಂದಿಗೆ ಪುಸ್ತಕ ಬಹುಮಾನ ಪ್ರಕಟಿಸಲಾಗಿದೆ. ಲಕ್ಮೀಷ ತೊಳ್ಪಾಡಿ, ಲೋಕೇಶ್ ಅಗಸನಕಟ್ಟೆ ದತ್ತಿ ಪ್ರಶಸ್ತಿಗೆ ಪಾತ್ರರಾದ ಪ್ರಮುಖರು.
2018ರ ವರ್ಷದ ಪುಸ್ತಕ ಬಹುಮಾನಕ್ಕೆ ಕಾವ್ಯ, ಕಾದಂಬರಿ, ಸಣ್ಣ ಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಆತ್ಮಕಥೆ, ಮಕ್ಕಳ ಸಾಹಿತ್ಯ, ವಿಜ್ಞಾನ, ಅನುವಾದ, ಅಂಕಣ ಬರಹ ಸೇರಿ 19 ವಿಭಾಗದಿಂದ ಪುಸ್ತಕಗಳನ್ನು ಆರಿಸಿಕೊಳ್ಳಲಾಗಿದೆ.
ಪ್ರಶಸ್ತಿಯು 25 ಸಾವಿರ ರೂ. ಪ್ರಮಾಣ ಪತ್ರ ಒಳಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2019ನೇ ಸಾಲಿನ ವರ್ಷದ ಗೌರವ ಪ್ರಶಸ್ತಿ 50 ಸಾವಿರ ರೂ. ನಗದು, ಫಲಕ ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ. ಸಾಹಿತ್ಯ ಶ್ರೀ ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಮಾಣಪತ್ರಗಳಿರುತ್ತವೆ.
9 ದತ್ತಿ ಬಹುಮಾನ