ಬಾಲಚಂದ್ರಗೆ ಕರ್ನಾಟಕ ಸಾಧಕ ರತ್ನ ಪ್ರಶಸ್ತಿ

Karnataka Sadhaka Ratna Award to Balachandra
Published on

ಮಡಿಕೇರಿ:

೬೮ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಳ್ಳಾರಿಯ ಸ್ಮಿಯಾಕ ಟ್ರಸ್ಟ್ ನೀಡಲಿರುವ ರಾಜ್ಯ ಮಟ್ಟದ ಕರ್ನಾಟಕ ಸಾಧಕ ರತ್ನ ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗಿನ ಕುಶಾಲನಗರದ ಆರ್. ಕೆ. ಬಾಲಚಂದ್ರ ಆಯ್ಕೆ ಆಗಿದ್ದಾರೆ. ಭಾನುವಾರ (ನ. ೨೬) ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದೇ ಸಂದರ್ಭ ಆರ್. ಕೆ. ಬಾಲಚಂದ್ರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅದರಲ್ಲೂ ಪ್ರಮುಖವಾಗಿ ಅನ್ಯ ರಾಜ್ಯದ ಕನ್ನಡೇತರರಿಗೆ ಕನ್ಮಡ ಕಲಿಸುವಿಕೆ, ರಾಜ್ಯಾದಂತ ಉಚಿತವಾಗಿ ಬ್ಯಾಂಕಿಂಗ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ನೀಡಿದ ತರಬೇತಿಯ ಸೇವೆಯನ್ನು ಗುರುತಿಸಿ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ "ಕರ್ನಾಟಕ ಸಾಧಕ ರತ್ನ" ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net