ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಲ್ಯಾಪ್‌ಟಾಪ್ ಕಳವು

laptop
Published on

ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 40 ಸಾವಿರ ರೂ. ಮೌಲ್ಯದ ಲ್ಯಾಪ್‌ಟಾಪ್ ಕಳವು ಮಾಡಲಾಗಿದೆ.

ಶಾಲೆಯ ಹೆಂಚು ತೆಗೆದು ಒಳ ನುಗ್ಗಿರುವ ಕಳ್ಳರು ಗಾಡ್ರೇಜ್ ಬೀರುವಿನಲ್ಲಿದ್ದ ಲ್ಯಾಪ್‌ಟಾಪ್ ಕದ್ದೊಯ್ದಿದ್ದಾರೆ. ಡಯೆಟ್‌ನಿಂದ ಲ್ಯಾಪ್‌ಟ್ಯಾಪ್ ತಂದಿದ್ದ ಶಿಕ್ಷಕಿ ಸುಶೀಲ ಅವರು ಕೆಲಸ ಮುಗಿಸಿ ಗಾಡ್ರೇಜ್ ಬೀರುವಿನಲ್ಲಿ ಇರಿಸುವಂತೆ ಶಾಲೆ ಅಟೆಂಡರ್‌ಗೆ ಹೇಳಿದ್ದರು.

ಹೆಂಚು ತೆಗೆದು ಲ್ಯಾಪ್‌ಟಾಪ್ ಕಳ್ಳತನ ಆಗಿರುವ ವಿಚಾರವನ್ನು ಅಟೆಂಡರ್, ಶಿಕ್ಷಕಿ ಸುಶೀಲ ಅವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net