ಮತದಾನ ನಡುವೆ ಮನಗೆದ್ದ ಸರ್ಕಾರಿ ಶಾಲೆ

school
Published on

ಉಡುಪಿ: ಚುನಾವಣೆಯ ಅಬ್ಬರದ ನಡುವೆ ಜಿಲ್ಲೆಯ ಶಾಲೆಯೊಂದು ಎಲ್ಲರ ಮನಗೆದ್ದಿದೆ. ಹಿರಿಯಡಕ ಬೊಮ್ಮರಬೆಟ್ಟು ಗ್ರಾ.ಪಂ ಮತಗಟ್ಟೆಯಾಗಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಯ ಸೌಂದರ್ಯ ಕಂಡು ಮತದಾರರು ಮತ್ತು ಅಧಿಕಾರಿಗಳು ಹುಬ್ಬೇರಿಸುವಂತಾಗಿತ್ತು.

ಶಾಲೆಯ ಕೈ ತೋಟ, ಉದ್ಯಾನವನ, ಕಲಾಕೃತಿಗಳ ರಚನೆ ಅತ್ಯಂತ ವಿಶಿಷ್ಟ ಮತ್ತು ಸುಂದರವಾಗಿತ್ತು. ಶಾಲೆ ಸೊಬಗು ವೀಕ್ಷಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ವಿಷ್ಣುವರ್ಧನ್ ಶಾಲೆಯ ಕಲಾ ಶಿಕ್ಷಕ ಮೋಹನ್ ಕಡಬ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾವಚಿತ್ರ ತೆಗೆಸಿಕೊಂಡರು.

ಶಾಲೆ ನೋಡಿರದ ಮತದಾರರು ಶಾಲೆಯ ಸೌಂದರ್ಯ ಕಂಡು ಮಾರು ಹೋದರು. ಈ ಶಾಲೆಯ 50ರ ಸಂಭ್ರಮ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಚುನಾವಣಾ ಆಯೋಗದ ಆಯುಕ್ತ ಡಿ.ಟಿ.ಎನ್ ಶೇಷನ್ ಆಗಮಿಸಿದ್ದರು ಎಂಬುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net