ವೈದ್ಯ ವೃತ್ತಿ ಉದ್ಯೋಗವಷ್ಟೇ ಅಲ್ಲ ಶ್ರೇಷ್ಠ ಸೇವೆ - ಸಂಸದ ಡಾ. ಸಿ.ಎನ್. ಮಂಜುನಾಥ್ ಅಭಿಮತ

Dr C N Manjunath
Published on

ಬೆಂಗಳೂರು: ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ವೈದ್ಯರ ಪಾತ್ರ ಅತ್ಯಂತ ಪ್ರಮುಖವಾದದ್ದು, ಹಾಗಾಗಿ ವೈದ್ಯ ವೃತ್ತಿ ಎನ್ನುವುದು ಉದ್ಯೋಗವಷ್ಟೇ ಅಲ್ಲದೆ, ಶ್ರೇಷ್ಠವಾದ ಸೇವೆಯಾಗಿದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.

ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಬೆಂಗಳೂರಿನ ಜ್ಞಾನಭಾರತಿಯ ಕಲಾಗ್ರಾಮದಲ್ಲಿ ಬುಧವಾರ ಹ್ಮಮಿಕೊಂಡಿದ್ದ ರಾಜ್ಯಮಟ್ಟದ ಶ್ರೇಷ್ಠ ವೈದ್ಯ ವೃತ್ತಿಗಾಗಿ ನೀಡಲಾಗುವ ‘2025ನೇ ಸಾಲಿನವೈದ್ಯ ಸೇವಾರತ್ನ ಹಾಗೂ ವೆಟರ್ನರಿ ಎಕ್ಸಲೆನ್ಸ್ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾನವ ಜೀವ ಉಳಿಸುವ ಧರ್ಮವೇ ವೈದ್ಯ ವೃತ್ತಿಯ ಜೀವಾಳವಾಗಿದ್ದು, ಕೇವಲ ಚಿಕಿತ್ಸೆ ನೀಡುವುದಲ್ಲದೆ ರೋಗ ನಿರ್ವಹಣೆ, ತಡೆಗಟ್ಟುವಿಕೆ, ಮಾನಸಿಕ ಸಮಾಧಾನ ಮತ್ತು ಸಮಗ್ರ ಆರೋಗ್ಯ ಕಾಳಜಿಯವರೆಗೆ ವೈದ್ಯರು ಸಲ್ಲಿಸುವ ಸೇವೆ ಅನನ್ಯವಾಗಿದೆ. ಸಮಾಜದಲ್ಲಿ ಜೀವ ಉಳಿಸುವವರಿಗಿಂತ ಶ್ರೇಷ್ಠರಾದವರು ಯಾರೂ ಇಲ್ಲ. ಹಾಗಾಗಿ ವೈದ್ಯರು ದಿನದ 24 ಗಂಟೆಗಳ ಕಾಲವೂ ರೋಗಿಗಳ ಸೇವೆಗೆ ನೆರವಾಗುವ ಸನ್ನದ್ಧತೆಯೇ ವೈದ್ಯರ ದೊಡ್ಡ ಶಕ್ತಿ. ಇಂದು ನೀಡಲಾಗುತ್ತಿರುವ ಈ ಪ್ರಶಸ್ತಿ ವೈದ್ಯರ ಸೇವೆ ಮತ್ತಷ್ಟು ಉತ್ತಮಗೊಳಿಸಲು ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಕಂಚುಗಲ್ ಬಂಡೇಮಠದ ಶ್ರೀ ಮಹಾಲಿಂಗ ಸಾಮೀಜಿ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್, ಹಿರಿಯ ವೈದ್ಯರಾದ ಡಾ. ಟಿ.ಹೆಚ್. ಅಂಜಿನಪ್ಪ, ಡಾ. ಕೆ.ಬಿ. ಲಿಂಗೇಗೌಡ ಇತರರು ಉಪಸ್ಥಿತರಿದ್ದರು.’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net