ಕೃಷಿ ವಿವಿ ಜಿಲ್ಲೆಗೆ ದೊಡ್ಡ ಕೊಡುಗೆ: ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್‌ಗೌಡ ಹೇಳಿಕೆ

Karnataka Pradesh Agricultural Society President press conference Mandya
Published on

ಮಂಡ್ಯ: ಜಿಲ್ಲೆಯ ಕೃಷಿಕರ ಬಹುದಿನದ ಕನಸಾದ ಕೃಷಿ ವಿಶ್ವವಿದ್ಯಾಲಯವನ್ನು ನನಸು ಮಾಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಯಶಸ್ವಿಯಾಗಿದ್ದಾರೆ. ವಿವಿಯಿಂದ ಜಿಲ್ಲೆಗೆ ದೊಡ್ಡ ಕೊಡುಗೆ ಸಿಕ್ಕಂತಾಗಿದೆ ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ಮಂಜುನಾಥ್‌ಗೌಡ ಹೇಳಿದರು.

ಮೈಸೂರು ವಿಭಾಗದಲ್ಲಿ ಇದೇ ಮೊದಲ ಕೃಷಿ ವಿಶ್ವವಿದ್ಯಾಲಯವಾಗಲಿದೆ. ವಿವಿಗೆ ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಹಾಸನ ಕೃಷಿ ಕಾಲೇಜು ಹಾಗೂ ಮೈಸೂರಿನ ತೋಟಗಾರಿಕೆ ಕಾಲೇಜು ಸೇರ್ಪಡೆಗೊಳ್ಳಲಿದೆ. ವಿವಿ ಎಲ್ಲ ಸಸ್ಯಶಾಸ್ತ್ರಗಳ ಸಮನ್ವಯತೆ ಸಾಧಿಸಿ, ಜಿಲ್ಲೆಯ ಹಾಗೂ ಈ ವಿಭಾಗಕ್ಕೆ ಒಳಪಡುವ ರೈತರಿಗೂ ನೂತನ ಅವಕಾಶಗಳನ್ನು ಕಲ್ಪಿಸುವಂತೆ ಕೆಲಸ ಮಾಡುವಂತಾಗಲಿ ಎಂದು ಸುದ್ದಿಗೋಷ್ಠಿಯಲ್ಲಿ ಹಾರೈಸಿದರು.

ಸಚಿವ ಸಿಆರ್‌ಎಸ್ ಮೈಷುಗರ್ ಕಾರ್ಖಾನೆಯ ಪುನಶ್ಚೇತನಗೊಳಿಸಿದ್ದಾರೆ. ವಿಜೃಂಭಣೆಯಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿರುವ ಚಲುವರಾಯಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಲು ಶೀಘ್ರವೇ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿದರು.

ಜಿಲ್ಲಾಧ್ಯಕ್ಷ ಸಿ.ಎಂ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷ ಜಿ.ಧನಂಜಯ, ಕೆ.ಜಿ.ನಾಗರಾಜ್, ವೆಂಕಟೇಶ್, ಪಿ.ಬಾಲಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net