

ಮಂಗಳೂರು : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕರಾಮುವಿ)2024-25ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿ ಆರಂಭಗೊಂಡಿದ್ದು, ನ.15ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ ಎಂದು ಕರಾಮುವಿಯ ಕುಲಪತಿ ಡಾ.ಶರಣಪ್ಪ ವಿ.ಹಲಸೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯುಜಿಸಿ ಅನುಮೋದಿತ ಸ್ನಾತಕ/ಸ್ನಾತಕೋತ್ತರ ಕೋರ್ಸ್‌ಗಳಾದ ಬಿ.ಎ., ಬಿಕಾಂ, ಬಿಬಿಎ, ಬಿಸಿಎ, ಬಿಎಸ್‌ಡಬ್ಲುೃ, ಬಿಎಲ್‌ಐಎಸ್ಸಿ, ಬಿಎಡ್ (ಸಿಇಟಿ ಮೂಲಕ), ಬಿಎಸ್ಸಿ, ಎಂಎ, ಎಂಸಿಜೆ, ಎಂಕಾಂ, ಎಂಎಲ್‌ಐಎಸ್ಸಿ, ಎಂಸಿಎ, ಎಂಎಸ್‌ಡಬ್ಲುೃ, ಎಂಎಎಸ್ಸಿ, ಎಂಬಿಎ ಪಿಜಿ ಡಿಪ್ಲೊಮಾ ಪ್ರೊಗ್ರಾಮ್ಸ್, ಡಿಪ್ಲೊಮಾ ಪ್ರೊಗ್ರಾಮ್ಸ್, ಸರ್ಟಿಫಿಕೆಟ್ ಪ್ರೊಗ್ರಾಮ್ಸ್‌ಗಳಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ. ಜತೆಗೆ 10 ಆನ್‌ಲೈನ್ ಕೋರ್ಸ್‌ಗಳಾದ ಬಿಎ-ಸಾಮಾನ್ಯ (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ), ಬಿಕಾಂ. ಎಂಎ-ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಅರ್ಥಶಾಸ್ತ್ರ, ಎಂಕಾಂ, ಎಂಬಿಎ, ಎಂಎಸ್‌ಸಿ-ಗಣಿತಶಾಸ್ತ್ರ, ಸಂಪೂರ್ಣ ಆನ್‌ಲೈನ್ ಕೋರ್ಸ್‌ಗಳು ಇರುತ್ತದೆ ಎಂದು ಅವರು ತಿಳಿಸಿದರು.
ಮಂಗಳೂರಿನ ಲೇಡಿಹಿಲ್ ಬಳಿ ಇರುವ ಒಕ್ಕಲಿಗರ ಯಾನೆ ಗೌಡರ ಸಂಘದ ಕಟ್ಟಡದ ಮೂರನೇ ಮಹಡಿಯಲ್ಲಿರುವ ಮಂಗಳೂರು ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ಕರಾಮುವಿಯ ಅಧಿಕೃತ ವೆಬ್‌ಸೈಟ್
(ಡಿಡಿಡಿ.ಟ್ಠಞಠ್ಠ್ಟ್ಠ.ಚ್ಚ.ಜ್ಞಿ ) ನಲ್ಲಿ ಕೆಎಸ್‌ಒಯು ಅಡ್ಮಿಶನ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ದಾಖಲಾತಿಗಳ ಪರಿಶೀಲನೆ ಹಾಗೂ ಆನ್‌ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಸಿದ್ಧಪಾಠಗಳನ್ನು ಪಡೆಯಬಹುದು. ಕರಾಮುವಿಯಲ್ಲಿ ಪ್ರವೇಶಾತಿ ಪಡೆಯುವ ಎಸ್‌ಸಿ/ಎಸ್‌ಟಿ/ಒಬಿಸಿ ವಿದ್ಯಾರ್ಥಿಗಳು ಅಗತ್ಯ ದಾಖಲೆ ಒದಗಿಸಿದ್ದಲ್ಲಿ ಎಸ್‌ಎಸ್‌ಪಿ ಮೂಲಕ ವಿದ್ಯಾರ್ಥಿ ವೇತನ ಇರುತ್ತದೆ ಅಥವಾ ಪೂರ್ಣಶುಲ್ಕ ಮರುಭರಿಕೆಯಾಗುತ್ತದೆ ಎಂದು ಅವರು ತಿಳಿಸಿದರು.
ಮಂಗಳೂರಿನ ದತ್ತ ನಗರದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದ ನೂತನ ಕಟ್ಟಡ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಉಡುಪಿ ಪ್ರಾದೇಶಿಕ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಒಂದು ಎಕರೆ ಜಾಗ ನೀಡಿದೆ ಎಂದು ಡಾ.ಶರಣಪ್ಪ ವಿ.ಹಲಸೆ ಹೇಳಿದರು.
ಕರಾಮುವಿ ಪ್ರಾದೇಶಿಕ ಕೇಂದ್ರಗಳ ಡೀನ್ ಡಾ.ರಾಮನಾಥ ನಾಯ್ಡು, ಪ್ರಾದೇಶಿಕ ನಿರ್ದೇಶಕರಾದ ಡಾ.ಬಿ.ಬಸವರಾಜು (ಮಂಗಳೂರು), ಡಾ.ಕೆ.ಪಿ.ಮಹಾಲಿಂಗಯ್ಯ (ಉಡುಪಿ), ಸ್ಮಿತಾ ಸುಬ್ಬಯ್ಯ (ಮಡಿಕೇರಿ), ಗುರುದತ್ತ (ಚಿಕ್ಕಮಗಳೂರು) ಉಪಸ್ಥಿತರಿದ್ದರು.