ಜಿಲ್ಲೆಯಲ್ಲಿ ರಾಷ್ಟ್ರಮಟ್ಟದ ರಂಗಭೂಮಿ ಕಾರ್ಯಾಗಾರ

udp-7-nataka
Published on

ಉಡುಪಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉಡುಪಿ, ಮಂಗಳೂರು, ಯಾದಗಿರಿ, ಬೀದರ್​ ಜಿಲ್ಲೆಗಳಲ್ಲಿ ರಂಗಭೂಮಿ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಜೂನ್​ ಅಥವಾ ಜುಲೈ ತಿಂಗಳಲ್ಲಿ ಉಡುಪಿಯಲ್ಲಿ ರಾಷ್ಟ್ರಮಟ್ಟದ ರಂಗಭೂಮಿ ಕಾರ್ಯಾಗಾರ ನಡೆಸಲು ಅಕಾಡೆಮಿ ಸಿದ್ಧವಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜ್​ ಮೂರ್ತಿ ಹೇಳಿದರು.

ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ರಂಗ ತಂಡಗಳ ಸದಸ್ಯರು, ಕಲಾವಿದರು ಹಾಗೂ ರಂಗಾಸಕ್ತರ ಸಂವಾದದಲ್ಲಿ ಅವರು ಮಾತನಾಡಿದರು.

ನಾಟಕ ಅಕಾಡೆಮಿ ವತಿಯಿಂದ ಈಗಾಗಲೇ 24 ಜಿಲ್ಲೆಗಳಲ್ಲಿ ರಂಗಭೂಮಿ ಕಾರ್ಯಾಗಾರ, 16 ನಾಟಕೋತ್ಸವ, 9 ವಿಚಾರ ಸಂಕಿರಣ, 1 ಅಂತಾರಾಷ್ಟ್ರೀಯ ನಾಟಕೋತ್ಸವ ಆಯೋಜಿಸಲಾಗಿತ್ತು. 26 ಜಿಲ್ಲೆಗಳಲ್ಲಿ ವಿಶ್ವರಂಗಭೂಮಿ ದಿನಾಚರಣೆ ನಡೆದಿದೆ. ಮುಂದಿನ ವರ್ಷ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ನಡೆಸಲಾಗುವುದು. ಈ ವರ್ಷದ ಬಜೆಟ್​ನಲ್ಲಿ ಅಕಾಡೆಮಿಗೆ 80 ಲಕ್ಷ ರೂ. ಅನುದಾನ ಲಭಿಸಿದ್ದು, 20 ಲಕ್ಷ ರೂ. ಸಂಬಳ, ಸಾರಿಗೆ, ಭತ್ಯೆಗೆ ರ್ಖಚಾಗುತ್ತದೆ. ಉಳಿದ 60 ಲಕ್ಷ ರೂ. ಅನುದಾನ ರಂಗಭೂಮಿ ಚಟುವಟಿಕೆಗೆ ಮೀಸಲಾಗಿದೆ. ಸ್ಥಳಿಯ ಪ್ರಾಯೋಜಕತ್ವದಲ್ಲಿ ಮಕ್ಕಳ ರಂಗೋತ್ಸವ, ಕಾಲೇಜು ವಿದ್ಯಾರ್ಥಿಗಳಿಗಾಗಿ ನಾಟಕೋತ್ಸವ ಆಯೋಜಿಸಬಹುದು ಎಂದು ಹೇಳಿದರು.

ಹಿರಿಯ ರಂಗಕರ್ಮಿಗಳಾದ ಪ್ರದಿಪ್​ಚಂದ್ರ ಕುತ್ಪಾಡಿ, ಭಾಸ್ಕರ ರಾವ್​, ರವಿರಾಜ್​ ಎಚ್​.ಪಿ. ಮಾತನಾಡಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಾಗೇಶ್​ ಉದ್ಯಾವರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಸಂತೋಷ್​ ನಾಯಕ್​ ಪಟ್ಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net