ನಾಟಕ ರಚನಾ ಶಿಬಿರ : ಅರ್ಜಿ ಆಹ್ವಾನ

kannada and culture dept
Published on

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲಿ ಅ. 3ರಿಂದ 10ವರೆಗೆ ರಾಜ್ಯಮಟ್ಟದ ನಾಟಕ ರಚನಾ ಶಿಬಿರ ಆಯೋಜಿಸಿದೆ.

ಈಗಾಗಲೇ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಹೆಸರು ಮಾಡಿರುವ 18 ರಿಂದ 40 ವರ್ಷದೊಳಗಿನ 20 ಯುವ ಬರಹಗಾರರಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ನಾಡಿನ ಶ್ರೇಷ್ಠ ನಾಟಕಕಾರರು ಹಾಗೂ ಕಲಾವಿದರು ಶಿಬಿರದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಆಸಕ್ತರು ಸೆ. 17ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಶಿಬಿರಾರ್ಥಿಗಳ ನೋಂದಣಿ ಮತ್ತು ಪ್ರವೇಶ ಉಚಿತವಾಗಿರಲಿದೆ.

ವಿಳಾಸ: ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ನೆಲಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು. ದೂ: 080-22244176/ 22237484/ಮೊ: 9481327867 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net