

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಮಂಗಳವಾರ (ಸೆ. 3) ಬೆಳಗ್ಗೆ 11ಕ್ಕೆ ಗಾಂಧಿ ಭವನದಲ್ಲಿ ‘ಸುಳ್ಳು ಸುದ್ದಿ -ಸಾಮಾಜಿಕ ನ್ಯಾಯದ ಮೇಲೆ ಪರಿಣಾಮ’ ವಿಷಯ ಕುರಿತು ವಿಚಾರಸಂಕಿರಣ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ಹಿರಿಯ ಪತ್ರಕರ್ತರಾದ ನಾಗಮಣಿ ಎಸ್. ರಾವ್, ಪ್ರೊ. ಬಿ.ಕೆ. ರವಿ, ವಾರ್ತಾ ಇಲಾಖೆ ಕಾರ್ಯದರ್ಶಿ ಡಾ. ಕೆ. ವಿ. ತ್ರಿಲೋಕಚಂದ್ರ, ಆಯುಕ್ತ ಹೇಮಂತ್ ನಿಂಬಾಳ್ಕರ್ ಮತ್ತಿತರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಗೂಗಲ್ ಟೀಮ್ನೊಂದಿಗೆ ಸಂವಾದ ನಡೆಯಲಿದೆ. ಕಾರ್ಯಗಾರದಲ್ಲಿ ಪಾಲ್ಗೊಳ್ಳಲು ಈ ಲಿಂಕ್ ಮೂಲಕ https://docs.google.com/forms/d/e/1FAIpQLSeKVKlToPWR_k3g6oBzC4I30iPfftZ70-LNQzM5bZSdMIdxcg/viewform?pli=1 ಹೆಸರು ನೋಂದಾಯಿಸಿಕೊಳ್ಳಬಹುದು.