ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

kannada and culture dept
Published on

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ/ ಪಂಗಡದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಸರ್ಕಾರದಿಂದ ಅಂಗೀಕೃತಗೊಂಡ ಚಿತ್ರಕಲಾ ಶಿಕ್ಷಣಕ್ಕೆ ಸಂಬಂಧಪಟ್ಟ ಬಿಎಫ್ಎ ಎಂಎಫ್ಎ ಚಿತ್ರಕಲಾ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಚಿತ್ರಕಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಕರ್ನಾಟಕದವರಾಗಿದ್ದು, ವಯೋಮಿತಿ 20ರಿಂದ 25 ವರ್ಷದೊಳಗಿರಬೇಕು.

ಆಸಕ್ತ ವಿದ್ಯಾರ್ಥಿಗಳು ತಮ್ಮ ಪೂರ್ಣ ವಿವರಗಳು, ಭಾವಚಿತ್ರ ಹಾಗೂ ಎರಡು ಕಲಾಕೃತಿಗಳ ಛಾಯಾಚಿತ್ರಗಳೊಂದಿಗೆ ಸೆ. 30ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅಕಾಡೆಮಿ ತಿಳಿಸಿದೆ. ವಿಳಾಸ: ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-2. ವೆಬ್‌ಸೈಟ್: https://lalitkala.karnataka.gov.in ಇಮೇಲ್: kla.karnataka@gmail.com ಹಾಗೂ ದೂ: 080-2248 0297.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net