ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ

Published on

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 1995 ನೇ ಸಾಲಿನಿಂದ ಪ್ರತಿ ವರ್ಷ ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ಗುರುತಿಸಿ ಗೌರವ ಪ್ರಶಸ್ತಿ ನೀಡುತ್ತಿದ್ದು, 2023ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರವನ್ನು ಪ್ರಕಟಿಸಿದೆ. ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಮಾರ್ಸೆಲ್ ಎಮ್. ಡಿಸೋಜ ಮಂಗಳೂರು, ಕೊಂಕಣಿ ಕಲೆ ವಿಭಾಗದಲ್ಲಿ ಹ್ಯಾರಿ ಫೆನಾರ್ಂಡಿಸ್ ಮುಂಬಯಿ, ಕೊಂಕಣಿ ಜಾನಪದ ವಿಭಾಗದಲ್ಲಿ ಆಶೋಕ್ ದಾಮು ಕಾಸರಕೋಡ್, ಪುಸ್ತಕ ಪುರಸ್ಕಾರ ವಿಭಾಗದಲ್ಲಿ ಮೇರಿ ಸಲೋಮಿ ಡಿಸೋಜ ಬಂಟ್ವಾಳ, ಕೊಂಕಣಿ ಸಣ್ಣಕತೆ ವಿಭಾಗದಲ್ಲಿ ಫಾ.ರೊಯ್ಸನ್ ಫೆನಾರ್ಂಡಿಸ ಹಿರ್ಗಾನ್, ಕೊಂಕಣಿ ಭಾಷಾಂತರ ವಿಭಾಗದಲ್ಲಿ ಸ್ಟೀಫನ್ ಮಸ್ಕರೇನ್ಹಸ್(ಹೇಮಾಚಾರ್ಯ) ಮಂಗಳೂರು ಅವರನ್ನು ಪ್ರಶಸ್ತಿಗೆ ಸಮಿತಿಯು ಆಯ್ಕೆ ಮಾಡಿದೆ. ಪ್ರಶಸ್ತಿ ಪುರಸ್ಕಾರ ಸಮಾರಂಭವು ನ.10 ರಂದು ಹೊನ್ನಾವರದ ಕಾಸರಕೋಡಿನಲ್ಲಿರುವ ಶ್ಯಾನಭಾಗ್ ರೆಸಿಡೆನ್ಸಿಯ ಅವರಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net