

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ರಾಜ್ಯ ಸರ್ಕಾರ ಅನುದಾನ ಕಡಿತ ಮಾಡಿರುವುದರಿಂದ ಈ ಹಿಂದಿನಂತೆ ಕಾರ್ಯ ಚಟುವಟಿಕೆ ಮಾಡಲು ಸಾಧ್ಯವಾಗಲಿಲ್ಲ. ಹೀಗಿದ್ದರೂ,
ಅರ್ಥಪೂರ್ಣ ಕಾರ್ಯಕ್ರಮ ಮಾಡಿದ ತೃಪ್ತಿ ಇದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ
ಪಾರ್ವತಿ ಅಪ್ಪಯ್ಯ ಹೇಳುತ್ತಾರೆ.
ಅ.೧೪ ರಂದು ೩ ವರ್ಷದ ಆಡಳಿತಾವಧಿ ಪೂರ್ಣಗೊಳ್ಳಲಿದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಹುದ್ದೆ
ಯಿಂದ ನಿವೃತ್ತರಾಗಿದ್ದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಚ್ಚರಿಕರ ರೀತಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ
ಅಲಂಕರಿಸಿದರು. ಈ ಹುದ್ದೆಗೆ ನೇಮಕಾತಿ ಹೇಗಾಯಿತ್ತೆಂಬ ನಿಗೂಢತೆ ಇಂದಿಗೂ ಮುಂದುವರಿದಿದೆ.
ಮಂಗಳೂರು ವಿಶ್ವ ವಿದ್ಯಾಲಯ ಸಿಂಡಿಕೇಟ್ ಸದಸ್ಯತ್ವಕ್ಕೆ ಪ್ರಯತ್ನಿಸುತ್ತಿದ್ದ ಡಾ.ಪಾರ್ವತಿ ಅಪ್ಪಯ್ಯ ಆಕ್ಮಸಿಕವಾಗಿ ಅಕಾಡೆಮಿ ಅಧ್ಯಕ್ಷ
ಸ್ಥಾನ ಅಲಂಕರಿಸಿದರು. ಉಪನ್ಯಾಸಕ ವೃತ್ತಿಯಲ್ಲಿದ್ದ ಅವರು ಕೊಡವ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ಎಂದಿಗೂ
ತೊಡಗಿಸಿಕೊಂಡಿದ್ದವರಲ್ಲ. ಅಧ್ಯಕ್ಷರಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಅಕಾಡೆಮಿ ಚಟುವಟಿಕೆಯಲ್ಲಿ ಸಕ್ರಿಯರಾದರು.
ಕೋವಿಡ್ ಹಾಗೂ ಅನುದಾನ ಕೊರತೆ ಕಾರ್ಯ ಚಟುವಟಿಕೆಗೆ ಅಡ್ಡಿಯಾಯಿತು. ಹಣಕಾಸಿನ ಕೊರತೆಯಿಂದ ಅಕಾಡೆಮಿಯಿಂದ
ಹಲವು ಪುಸ್ತಕ ಪ್ರಕಟಿಸಲು ಸಾಧ್ಯವಾಗಲಿಲ್ಲ. ೮ ಲಕ್ಷ ರೂ. ಮೊತ್ತದ ದುಡಿ ಕೊಡಬೇಕಾಗಿತ್ತು. ಹಣ ಇಲ್ಲದರಿಂದ ಕೊಡಲು
ಸಾಧ್ಯವಾಗಲಿಲ್ಲ. ಅನುದಾನ ಕೊರತೆಯಿಂದ ಉದ್ದೇಶಿತ ಕೆಲವು ಕಾರ್ಯಕ್ರಮ ಕೈಬಿಡಲಾಗಿದೆ. ಆಟ್ ಪಾಟ್ ಪಡಿಪು ಕಾರ್ಯಕ್ರಮ
ಮಾಡಲು ಸಾಧ್ಯವಾಗ ಲಿಲ್ಲ. ೩೦ ಲಕ್ಷ ರೂ. ಹೆಚ್ಚುವರಿ ಅನುದಾನ ನೀಡುವಂತೆ ಸರ್ಕಾರದ ಗಮನ ಸೆಳೆಯಲಾಗಿದೆ ಎನ್ನುತ್ತಾರೆ
ಅಧ್ಯಕ್ಷರು.
ಶಬ್ದಕೋಶ, ಕೊಡವ ವ್ಯಾಕರಣ ಪುಸ್ತಕ, ತರ್ಜುಮೆ ಕೃತಿ, ಹಲವು ಪ್ರಖ್ಯಾತ ಸಾಹಿತಿಗಳ ಕೃತಿ ಮರುಮುದ್ರಣ ಮಾಡಲಾಗಿದೆ. ಐ.ಮಾ.
ಮುತ್ತಣ್ಣ, ಬಿ.ಡಿ. ಗಣಪತಿ ಶತಮಾನೋತ್ಸವ ಕಾರ್ಯಕ್ರಮ ಆಯೋಜನೆ ಮಾಡುವುದರೊಂದಿಗೆ ಸ್ಮರಣ ಸಂಚಿಕೆ ಹೊರ ತರಲಾಗಿದೆ.
ಅಕಾಡೆಮಿಯ ತ್ರೈಮಾಸಿಕ ಸಂಚಿಕೆ ಪೊಂಗುರಿ (೬) ಹೊರ ತರಲಾಗಿದೆ.
ಮಡಿಕೇರಿ, ಬೆಂಗಳೂರು, ನಾಪೋಕ್ಲುವಿನಲ್ಲಿ ಕೊಡವ ಆದಿ ಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಜನ್ಮ ದಿನಾಚರಣೆ
ಅರ್ಥಪೂರ್ಣ ವಾಗಿ ಆಚರಿಸಲಾಗಿದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ, ಶಿಲ್ಪಿ ಕಾಮೆಯಂಡ
ಮುತ್ತಣ್ಣ ಜನ್ಮ ದಿನಾಚರಣೆ ಅಕಾಡೆಮಿಯಿಂದ ಆಚರಿಸಲಾಗಿದೆ.
ಕಥೆ, ಕವನ, ಪ್ರಬಂಧ, ಚಿತ್ರಕಲೆ, ನಾಟಕ, ಬಾಳೋಪಾಟ್ ಸೇರಿದ್ದಂತೆ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ್ದಂತೆ ಸ್ಪರ್ಧೆಗಳನ್ನು ಆಯೋಜಿಸ
ಲಾಗಿತ್ತು. ಐನ್‌ಮನೆ, ಪಟ್ಟೋಲೆ ಪಳಮೆ, ಕೃಷಿ, ಮಹಿಳೆಯರು ಸೇರಿದ್ದಂತೆ ವಿವಿಧ ಮಹತ್ವದ ವಿಚಾರದ ಕುರಿತು
ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿತ್ತು.
ಕಲಾವಿದರಿಗೆ ದುಡಿ ನೀಡಲಾಗಿದೆ. ಕೆಂಬಟ್ಟಿ, ಕಾಪಾಳ ಜನಾಂಗಕ್ಕೆ ಬೇಕಾದ ಅಗತ್ಯ ಪರಿಕರ ಒದಗಿಸಲಾಗಿದೆ. ಮಂದ್ ನಮ್ಮೆ, ಕೈಲ್
ಪೊಳ್ದ್ ನಮ್ಮೆ, ಭಾಷಿಕರ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊಡವ ಸಾಂಪ್ರದಾಯಿಕ ವಾಲಗ ತರಬೇತಿ ಕೂಡ
ಆಯೋಜಿಸಲಾಗಿತ್ತು. ಗುರುವಾರ (ಅ.೧೩) ಸಂಶೋಧನಾ ಕೃತಿಗಳು ಅನಾವರಣಗೊಳ್ಳಲಿವೆ.
ಕೊಡವ ಪದವಿ
ವಿದ್ಯಾಸಂಸ್ಥೆಯಲ್ಲಿ ಕೊಡವ ಭಾಷೆ ಕಲಿಸಲು ತರಗತಿ ಪ್ರಾರಂಭಿಸಿರುವುದು ಅಕಾಡೆಮಿಯ ದೊಡ್ಡ ಸಾಧನೆ. ಫೀಲ್ಡ್ ಮಾರ್ಷಲ್ ಕೆ.ಎಂ.
ಕಾರ್ಯಪ್ಪ ಕಾಲೇಜಿನಲ್ಲಿ ಎಂಎ (ಕೊಡವ) ಸ್ನಾತಕೋತ್ತರ ಪದವಿ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜಿ ನಲ್ಲಿ ಬಿಎ ಪದವಿ
ತರಗತಿ ಪ್ರಾರಂಭಿಸಲಾಗಿದೆ. ಎಂಎಗೆ ೯ ಹಾಗೂ ಬಿಎಗೆ ೧೫ ವಿದ್ಯಾರ್ಥಿಗಳು ಸೇರಿದ್ದಾರೆ.
ಕೊಡವ ತಕ್ಕ್ ಅನ್ನು ತೃತೀಯ ಭಾಷೆಯನ್ನಾಗಿ ಮಾಡುವುದು ಹಾಗೂ ೮ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ನಿರಂತರವಾಗಿ
ಸರ್ಕಾರದ ಗಮನ ಸೆಳೆಯುವ ಕಾರ್ಯ ನಡೆದಿದೆ.
೯೦ ಕೃತಿ ಲೋಕಾರ್ಪಣೆ
ಮೂರು ವರ್ಷದಲ್ಲಿ ಬರೋಬರಿ ೯೦ ಕೃತಿ ಲೋಕಾರ್ಪಣೆ ಮಾಡಲಾಗಿದೆ. ೪ ದಾಖಲೀಕರಣ, ೧೭ ಸಂಶೋಧಾನಾ ಕೃತಿಗಳು
ಸೇರಿವೆ. ೨ ದಾಖಲೀಕರಣ ಕೃತಿ ಪ್ರಗತಿಯಲ್ಲಿದೆ. ಪದವಿ ವಿದ್ಯಾರ್ಥಿಗಳಿಗೆ ಬೋಧಿಸಲು ೨೦ ಕೊಡವ ಪಠ್ಯಪುಸ್ತಕ
ತಯಾರಿಸಲಾಗಿದೆ. ೧ ರಿಂದ ೫ನೇ ತರಗತಿ ವಿದ್ಯಾರ್ಥಿಗಳಿಗೆ ೫ ಪಠ್ಯಪುಸ್ತಕ ತಯಾರಿಸಲಾಗಿದೆ. ೩ ವರ್ಷ ಅವಧಿಯಲ್ಲಿ ೨ ಬಾರಿ
ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ನೀಡ ಲಾಗಿದೆ.
೨ ತಿಂಗಳಿಗೆ ೪ ಸದಸ್ಯರು
ಅಕಾಡೆಮಿ ಅವಧಿ ಪೂರ್ಣಗೊಳ್ಳುವ ೨ ತಿಂಗಳ ಮೊದಲು ನಾಲ್ವರು ಸದಸ್ಯರನ್ನು ಸರ್ಕಾರ ನೇಮಿಸಿತ್ತು. ಡಾ.ಪಾರ್ವತಿ ಅಪ್ಪಯ್ಯ
ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ವೇಳೆ ಕೇವಲ ೭ ಸದಸ್ಯರನ್ನು ನೇಮಕ ಮಾಡಲಾಗಿತ್ತು. ತದನಂತರ ಅಕಾಡೆಮಿ
ಶಿಫಾರಸ್ಸಿನ ಮೇಲೆ ೩ ಸದಸ್ಯರು ನೇಮಕಗೊಂಡಿದ್ದರು. ಸರ್ಕಾರದಿಂದ ೧೦ ಸದಸ್ಯರನ್ನು ನೇಮಕ ಮಾಡಲು ಅವಕಾಶವಿದ್ದು, ಕೊನೆ
ಕ್ಷಣದಲ್ಲಿ ೪ ಸದಸ್ಯರನ್ನು ನೇಮಕ ಮಾಡಿದ್ದರಿಂದ ಒಂದು ಸದಸ್ಯರ ಹೆಚ್ಚುವರಿ ನೇಮಕಾತಿ ಆಗಿತ್ತು.
**
ಸರ್ಕಾರ ಅಕಾಡೆಮಿಗೆ ಬಿಡುಗಡೆ ಮಾಡುತ್ತಿರುವ ಅನುದಾನದಲ್ಲಿ ಕಡಿತಗೊಂಡಿರುವುದರಿಂದ ಉದ್ದೇಶಿಸಿತ ಕೆಲವು ಕಾರ್ಯಕ್ರಮ
ಕೈಬಿಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಕಾಡೆಮಿಯ ಕಾರ್ಯ ಚಟುವಟಿಕೆಗೆ ಅಡ್ಡಿಯಾಯಿತು. ಹೆಚ್ಚು ಜನ ಸೇರಿಸಿ ಕಾರ್ಯಕ್ರಮ
ಮಾಡುವ ಬದಲು ಅರ್ಥಪೂರ್ಣ ಕಾರ್ಯಕ್ರಮ ಮಾಡಲಾಗಿದೆ. ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಅಧ್ಯಕ್ಷೆ, ಕರ್ನಾಟಕ ಕೊಡವ
ಸಾಹಿತ್ಯ ಅಕಾಡೆಮಿ.