ಅಪ್ರತಿಮ ಶಿಲ್ಪ ಕಲಾವಿದ ಕಾಮೆಯಂಡ ಮುತ್ತಣ್ಣ

2mdks10 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕಾಮೆಯಂಡ ಮುತ್ತಣ್ಣ ನಾಡು ಕಂಡ ಅಪ್ರತಿಮ ಶಿಲ್ಪ ಕಲಾವಿದರೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಬಣ್ಣಿಸಿದರು.

ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾಮೆಯಂಡ ಮುತ್ತಣ್ಣ ಸಂಸ್ಮರಣಾ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಮರಣಾ ಕಾರ್ಯಕ್ರಮದ ಮೂಲಕ ಅವರ ಬಗ್ಗೆ ಜನರಿಗೆ ಮತ್ತಷ್ಟು ತಿಳಿದುಕೊಳ್ಳಲು ಅವಕಾಶ ಸಿಕ್ಕಿದೆ ಎಂದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಇದುವರೆಗೂ ಎಲೆಮರೆ ಕಾಯಿಯಂತಿದ್ದ ಶಿಲ್ಪ ಕಲಾವಿದ ಕಾಮೆಯಂಡ ಮುತ್ತಣ್ಣ ಅವರನ್ನು ಕೊಡವ ಸಾಹಿತ್ಯ ಅಕಾಡೆಮಿ ನಾಡಿಗೆ ಪರಿಚಯಿಸುವಂತಹ ಉತ್ತಮ ಕೆಲಸ ಮಾಡಿದೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.

ಪತ್ರಕರ್ತ ಐಮಂಡ ಗೋಪಾಲ್ ಸೋಮಯ್ಯ ನಿರ್ದೇಶನದ ಕಾಮೆಯಂಡ ಮುತ್ತಣ್ಣ ಅವರ ೧೫ ನಿಮಿಷಗಳ ಸಾಕ್ಷ್ಯಚಿತ್ರ ಪ್ರದರ್ಶಿಸ ಲಾಯಿತು. ವೇದಿಕೆಯಲ್ಲಿ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ಸದಸ್ಯ ರಾಮ್ ಗೌತಮ್, ಚಿತ್ರ ಕಲಾವಿದ ಐಮಂಡ ರೂಪೇಶ್ ನಾಣಯ್ಯ, ಕಾಮೆಯಂಡ ಮುತ್ತಣ್ಣ ಅವರ ಪುತ್ರರಾದ ಕಾಮೆಯಂಡ ಕರುಂಬಯ್ಯ, ಹರೀಶ್ ಭೀಮಯ್ಯ ಇದ್ದರು.

ಅಜ್ಜಿಕುಟ್ಟೀರ ಗಿರೀಶ್ ಸ್ವಾಗತಿಸಿದರು. ಮಾಚಿಮಾಡ ಜಾನಕಿ ಪ್ರಾರ್ಥಿಸಿದರು. ಬಬ್ಬೀರ ಸರಸ್ವತಿ ವಂದಿಸಿದರು. ಪಡಿಞಾಂರಂಡ ಪ್ರಭುಕುಮಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net