ಅರುಂಧತಿಯಾರ್ ಜನಾಂಗಕ್ಕೆ ಒಳ ಮೀಸಲಾತಿ ಸಿಗಲಿ: ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಆಗ್ರಹ

Karnataka Janshakti Sangathane press conference Mandya
Published on

ಮಂಡ್ಯ: ಗ್ರಾಮ ಪಂಚಾಯಿತಿಯಿಂದ ನಗರ ಪ್ರದೇಶಗಳವರೆಗೆ ಸ್ವಚ್ಛತಾ ಸೇವೆಯಲ್ಲಿ ತೊಡಗಿರುವ ಪೌರ ಸೇವಕರಾದ ಆದಿದ್ರಾವಿಡ ಅರುಂಧತಿಯಾರ್ ಜನಾಂಗಕ್ಕೆ ಒಳ ಮೀಸಲಾತಿ ನೀಡಲು ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಆಗ್ರಹಿಸಿದರು.

ಆದಿದ್ರಾವಿಡ ಅರುಂಧತಿಯಾರ್ ಜನಾಂಗವು ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿ, ಶೈಕ್ಷಣಿಕವಾಗಿ ಕಟ್ಟ ಕಡೆಯ ಸಮುದಾಯವಾಗಿ ಉಳಿದಿದ್ದು, ಒಳಮೀಸಲಾತಿಯಿಂದಲೂ ವಂಚಿತರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗ ಮೂಲಕ ಜಾತಿಗಣತಿ ನಡೆಸುತ್ತಿದ್ದು, ಒಳಮೀಸಲಾತಿಯಿಂದ ವಂಚಿತ ಆದಿದ್ರಾವಿಡ ಅರುಂಧತಿಯಾರ್ ಸಮುದಾಯ ಗುರುತಿಸಿ ಪ್ರತ್ಯೇಕ ಮಿಸಲಾತಿ ನೀಡಲು ಸಮೀಕ್ಷೆಯಲ್ಲಿ ಅವಕಾಶ ಕಲ್ಪಿಸಬೇಕು. ಅದರಂತೆ ಅರುಂಧತಿಯಾರ್ ಸಮುದಾಯದವರು ಸಮೀಕ್ಷೆಯ ವೇಳೆಯಲ್ಲಿ ಸರಿಯಾದ ಮಾಹಿತಿ ನೀಡಿ, ಒಳಮೀಸಲಾತಿ ಪಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಆದಿದ್ರಾವಿಡ ಅರುಂಧತಿಯಾರ್ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಕೆ.ನಾಗಮಣಿ, ನಗರ ಘಟಕದ ಅಧ್ಯಕ್ಷ ರವಿ, ಪಳನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net