ಕೇಂದ್ರದ ಯೋಜನೆ ಅಳವಡಿಸಿಕೊಂಡಲ್ಲಿ ಕರ್ನಾಟಕವೂ ರಾಮರಾಜ್ಯ

18 ckm 6
ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಅಭಿನಂದಿಸಲಾಯಿತು. ಕೋಟ ಶ್ರೀನಿವಾಸ ಪೂಜಾರಿ, ಎಂ.ಆರ್.ದೇವರಾಜ ಶೆಟ್ಟಿ, ಕೋಟೆ ರಂಗನಾಥ್, ಕೆ.ಪುಷ್ಪರಾಜ್, ಎಚ್.ಸಿ.ಕಲ್ಮರುಡಪ್ಪ, ಮಧುಕುಮಾರ್ ರಾಜ್ ಅರಸ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕೇಂದ್ರದ ಎನ್‌ಡಿಎ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಪೈಕಿ ಶೇ. ೧೦ ರಿಂದ ೧೫ರಷ್ಟನ್ನು ರಾಜ್ಯ ಸರ್ಕಾರ ಅಳವಡಿಸಿಕೊಂಡಲ್ಲಿ ಕರ್ನಾಟಕವೂ ರಾಮ ರಾಜ್ಯವಾಗುತ್ತದೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಗೆ ಗುರುವಾರ ಆಗಮಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವು ಒಳ್ಳೆಯ ಅಧಿಕಾರಿಗಳಿದ್ದಾರೆ. ಅಂಥವರನ್ನು ಕೆಲವೇ ದಿನಗಳಲ್ಲಿ ದೆಹಲಿಗೆ ಕರೆದೊಯ್ದು ಕೇಂದ್ರದ ಕಾರ್ಯಕ್ರಮಗಳೇನು?, ರಾಜ್ಯಕ್ಕೆ ಕೊಡುವ ನೆರವು ಏನು?, ಅದರ ಉz್ದೆÃಶವೇನು?, ಅದರಿಂದಾಗುವ ಪ್ರಗತಿ ಏನು? ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು ಎನ್ನುವ ಅಭಿಲಾಷೆ ಹೊಂದಿz್ದÉÃನೆ. ಭವ್ಯ ಭಾರತದ ಭವಿಷ್ಯದಲ್ಲಿ ನರೇಂದ್ರ ಮೋದಿ ಅವರ ದೂರ ದೃಷ್ಠಿಯ ಚಿಂತನೆಗಳು ನಮ್ಮೆಲ್ಲರಿಗೂ ಬೆನ್ನೆಲುಬಾಗಿದೆ ಎಂದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಮಾತಿನಂತೆ ಅನುಭವಿಗಳಾಗಿದ್ದಾರೆ. ಅವರಂಥ ಇನ್ನೊಬ್ಬ ವ್ಯಕ್ತಿ ಕರ್ನಾಟಕದಲ್ಲಿ ಇಲ್ಲ ಎನ್ನುವುದು ನಮ್ಮ ೪೦ ವರ್ಷದ ರಾಜಕೀಯದ ಅನುಭವದಿಂದ ಹೇಳುತ್ತಿz್ದÉÃನೆ. ಚಿಕ್ಕಮಗಳೂರು-ಉಡುಪಿ ಜನರು ಅವರ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆ ಪಕ್ಷ ಸಂಘಟನೆಗೆ ಹೆಸರಾಗಿರುವಂತಹದ್ದು, ಒಮ್ಮೊಮ್ಮೆ ಎಡವಟ್ಟಾಗುತ್ತದೆ. ಯರ‍್ಯಾರು ಪಕ್ಷ ಬಿಟ್ಟು ಹೋಗಿದ್ದಾರೆ ಅವರ ಪಟ್ಟಿ ಸಿದ್ಧಪಡಿಸಿ ಅವರನ್ನು ಮತ್ತೆ ಕರೆತರುವ ಕೆಲಸ ಮಾಡೋಣ. ಅದು ಜಿಲ್ಲಾಧ್ಯಕ್ಷರ ಜವಾಬ್ದಾರಿ. ಗೆಲ್ಲಲಿಕ್ಕೆ ಎಲ್ಲರೂ ಬೇಕು. ಸೋಲಲು ಯಾರೂ ಬೇಕಿಲ್ಲ ಎನ್ನುವುದಕ್ಕೆ ಸಿ.ಟಿ.ರವಿ ಅವರು ಸಹ ಉದಾಹರಣೆ. ರವಿ ಅವರು ಯಾರಿಗೆ ಏನು ಕೊಟ್ಟಿದ್ದಾರೋ ಗೊತ್ತಿಲ್ಲ. ಒಳ್ಳೆ ನಡವಳಿಕೆ, ಒಳ್ಳೆತನವನ್ನು ಕೊಟ್ಟಿದ್ದಾರೆ. ತನ್ನ ಮನಸಿನಲ್ಲಿರುವುದನ್ನು ಬಿಚ್ಚಿ ಹೇಳಿದ್ದಾರೆ. ಅಂತಹ ನಾಯಕರ ನೇತೃತ್ವದಲ್ಲಿ ಮುಂದುವರಿಯಬೇಕು ಎಂದರು.
ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಮುಖಂಡರಾದ ಕೋಟೆ ರಂಗನಾಥ್, ಕೆ.ಪುಷ್ಪರಾಜ್, ಗುಣಸಾಗರ ರವಿ ಕುಮಾರ್, ಮಧುಕುಮಾರ ರಾಜ್ ಅರಸ್, ಈಶ್ವರಹಳ್ಳಿ ಮಹೇಶ್, ಎಚ್.ಸಿ.ಕಲ್ಮರುಡಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net