

ಚಿಕ್ಕಬಳ್ಳಾಪುರ: ಮಾವಿನ ಬೆಳೆಗೆ ಬೆಂಬಲ ಬೆಲೆ ಘೋಷಣೆಯ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್ ಟಾಂಗ್ ನೀಡಿದ್ದಾರೆ.
ಕೆಂಪೇಗೌಡ ಜಯಂತ್ಯುತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾವಿನ ಬೆಲೆ ಕುಸಿತದಿಂದ ರೈತರು ಕಂಗಲಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ ಬೆಲೆ ಘೋಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದರ ಜತೆಗೆ ನಿರಂತರವಾಗಿ ಒತ್ತಡವನ್ನು ಹೇರಿದರು. ಕೇಂದ್ರ ತೋಟಗಾರಿಕಾ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಚರ್ಚಿಸಿ, ಭರವಸೆಯನ್ನು ಪಡೆಯಲಾಯಿತು. ಕೊನೆಗೆ ಅನುಷ್ಠಾನಗೊಂಡಿತು. ಇದರ ನಡುವೆ ಕುಮಾರಸ್ವಾಮಿ ಒಂದು ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ, ರೈತಪರ ಒತ್ತಡ ಹೇರಿ ಕೆಲಸ ಮಾಡಿಸಿರುವುದರ ಬಗ್ಗೆ ಪ್ರಚಾರ ಕೈಗೊಂಡಿದ್ದಾರೆ ಎಂದರು.
ಮೊದಲು ಖುದ್ದು ಸಿಎಂ, ಬಳಿಕ ನಿರಂತರ ರಾಜ್ಯ ಸರ್ಕಾರವು ಒತ್ತಡ ಹೇರಿಕೊಂಡು ಬಂದಿರುವುದಕ್ಕೆ ಬೆಲೆ ಇಲ್ಲವೇ?. ವಿಡಿಯೋ ಕಾನ್ಫರೆನ್ಸ್ನಲ್ಲಿ ಒತ್ತಾಯಕ್ಕೆ ಮಣಿದು, ಕೇಂದ್ರ ಸಚಿವರು ಬೆಂಬಲ ಬೆಲೆ ಕೊಡುವ ಭರವಸೆಯನ್ನು ನೀಡಿದ್ದರು. ಹೀಗೆ ಕುಮಾರಸ್ವಾಮಿ ಪತ್ರ ಬರೆಯುವುದಕ್ಕೆ ಮೊದಲೇ ಒಪ್ಪಿಗೆ ಸಿಕ್ಕಿತ್ತು. ಇದಕ್ಕೂ ಆದರೆ, ಒಂದು ಪತ್ರದಿಂದಲೇ ಬೆಂಬಲ ಬೆಲೆ ಸಿಕ್ಕಿದೆ ಎಂದೇಳಿಕೊಳ್ಳಲಾಗಿದೆ ಎಂದು ವ್ಯಂಗ್ಯವಾಡಿದರು.