

ಬೆಂಗಳೂರು: ವಿದ್ಯುತ್ ಅವಡದಲ್ಲಿ ಮೃತಪಟ್ಟ ಹಾಸನದ ವ್ಯಕ್ತಿಯೊಬ್ಬರ ಪತ್ನಿ ಹಾಗೂ ಗಾಯಗೊಂಡಿದ್ದ ಬೆಂಗಳೂರಿನ ಅಪ್ರಾಪ್ತ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿರುವ ಹೈಕೋರ್ಟ್, 2017-18ರ ನಡುವೆ ಸಂಭವಿಸಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 1.28 ಕೋಟಿ ರೂ. ಪರಿಹಾರ ಪಾವತಿಸುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಆದೇಶಿಸಿದೆ. ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದ್ದ ಸಕಲೇಶಪುರದ ಕೃಷಿ ಕೂಲಿಕಾರ್ಮಿಕ ಎನ್.ಎಂ. ಸುಬ್ರಹ್ಮಣ್ಯ (36) ಪತ್ನಿ ರೇಖಾ ಹಾಗೂ ಗಾಯಗೊಂಡಿದ್ದ ಬೆಂಗಳೂರಿನ ಬಾಲಕಿ ಕೆ. ಚಂದನಾ (15) ಮತ್ತು ಮುಯೀಜ್ ಅಹ್ಮದ್ ಶರೀಫ್ (7) ಪರಿಹಾರ ಕೋರಿ ಹೈಕೋರ್ಟ್ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಪೀಠ, ಚಂದನಾಗೆ 51,76,000 ರೂ. ಪರಿಹಾರ ಪಾವತಿಸುವಂತೆ ಬೆಸ್ಕಾಂಗೆ ಹಾಗೂ ಮುಯಿಜ್ ಅಹ್ಮದ್ ಶರೀಫ್ಗೆ 50,82,050 ರೂ. ಮತ್ತು ಸುಬ್ರಹ್ಮಣ್ಯ ಅವರ ಪತ್ನಿ ರೇಖಾಗೆ 25,52,500 ರೂ. ಪರಿಹಾರ ಪಾವತಿಸುವಂತೆ ಕೆಪಿಟಿಎಸ್ಎಲ್ಗೆ ನಿರ್ದೇಶಿಸಿದೆ.
ವರದಿಗೆ ಕಾಯದೆ ಪರಿಹಾರ ನೀಡಬೇಕು: ಓವರ್ ಹೆಡ್ ವಿದ್ಯುತ್ ಲೇನ್ಗಳಿಂದ ಅವಡ ಸಂಭವಿಸಿದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಕಂಪನಿಗಳು ಮುಖ್ಯ ಎಲೆಕ್ಟ್ರಿಕಲ್ ನಿರೀಕ್ಷಣಾ ಕಚೇರಿಯಿಂದ (ಸಿಇಐಜಿ) ಟನೆಗೆ ಸಂಬಂಧಿಸಿದ ವರದಿಗಾಗಿ ಕಾಯದೆ 2 ತಿಂಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿದ್ಯುತ್ ಪೂರೈಕೆ ಸಂಸ್ಥೆಗಳಿಗೆ ಆದೇಶ ನೀಡಿದೆ.
ಪರಿಹಾರ ನಿರಾಕರಿಸಿದ್ದ ಕೆಪಿಟಿಸಿಎಲ್: ಕೃಷಿ ಕಾರ್ಮಿಕ ಸುಬ್ರಹ್ಮಣ್ಯ 2018ರ ಫೆ.22ರಂದು ಸಕಲೇಶಪುರದ ಕಾಫಿ ಎಸ್ಟೇಟ್ನಲ್ಲಿ ಅಲ್ಯೂಮಿನಿಯಂ ಏಣಿಯ ಮೇಲೆ ನಿಂತು ಕಾಳು ಮೆಣಸು ಕೊಯ್ಲು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿ ಏಣಿಯ ಸಂಪರ್ಕಕ್ಕೆ ಬಂದು ವಿದ್ಯುತ್ ಪ್ರವಹಿಸಿತ್ತು. ಇದರಿಂದ, ಸುಬ್ರಹ್ಮಣ್ಯ ಮೃತಪಟ್ಟಿದ್ದರು.
ಟನೆಯಲ್ಲಿ ತನ್ನ ತಪ್ಪಿಲ್ಲ, ಮೃತ ಕಾರ್ಮಿಕ ಕೆಲಸ ಮಾಡುತ್ತಿದ್ದ ತೋಟದ ಮಾಲೀಕ ರ್ನಿಲಕ್ಷ$್ಯವೇ ಕಾರಣವೆಂದಿದ್ದ ಕೆಪಿಟಿಸಿಎಲ್ ಪರಿಹಾರ ಪಾವತಿಸಲು ನಿರಾಕರಿಸಿತ್ತು. ಇದರಿಂದ ಮೃತನ ಪತ್ನಿ ರೇಖಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಪರಿಹಾರ ನೀಡಲು ಕೆಪಿಟಿಸಿಎಲ್ಗೆ ಆದೇಶಿಸುವಂತೆ ಕೋರಿದ್ದರು.
ಪರಿಹಾರ ಹೆಚ್ಚಳ ಕೋರಿ ಅರ್ಜಿ
ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿ ನಿವಾಸಿ ಚಂದನಾ 2017ರ ಅ.19ರಂದು ಕಬ್ಬಿಣದ ಕಂಬಿಗಳನ್ನು ಹೊತ್ತುಕೊಂಡು ಮನೆಯ ಮೆಟ್ಟಿಲೇರುತ್ತಿದ್ದ ಸಂದರ್ಭ ಪಕ್ಕದಲ್ಲೇ ಹಾದು ಹೋಗಿದ್ದ 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿಗಳು ಸ್ಪರ್ಶಿಸಿತ್ತು. ಇದರಿಂದ, ವಿದ್ಯುತ್ ಪ್ರವಹಿಸಿ ಚಂದನಾ ಶೇ.79 ಅಂಗ ವೈಕಲ್ಯಕ್ಕೆ ತುತ್ತಾಗಿದ್ದಳು. ಬೆಸ್ಕಾಂ ಆಕೆಗೆ 2.5 ಲಕ್ಷ ರೂ. ಪರಿಹಾರ ನೀಡಿತ್ತು. ಗುರಪ್ಪನಪಾಳ್ಯದ ಮುಯೀಜ್ ಅಹ್ಮದ್ ಶರೀಫ್ 2017ರ ಸೆ.16ರಂದು ಕ್ರಿಕೆಟ್ ಬಾಲ್ ತೆಗೆದುಕೊಳ್ಳಲು ಪಕ್ಕದ ಕಟ್ಟಡಕ್ಕೆ ಜಿಗಿದಿದ್ದ. ಈ ಸಂದರ್ಭದಲ್ಲಿ 66 ಕೆ.ವಿ. ಸಾಮರ್ಥ್ಯದ ಹೈ ಟೆನ್ಷನ್ ಲೇನ್ನ ಇಂಡಕ್ಷನ್ ಜೋನ್ ಸಮೀಪಕ್ಕೆ ಹೋದಾಗ ವಿದ್ಯುತ್ ಪ್ರವಹಿಸಿ ಶೇ.80 ಸುಟ್ಟಗಾಯಗಳಾಗಿತ್ತು. ಆತನಿಗೆ ಬೆಸ್ಕಾಂ 5 ಲಕ್ಷ ರೂ. ಪರಿಹಾರ ಪಾವತಿಸಿತ್ತು. ಇದರಿಂದ, ಎರಡೂ ಪ್ರಕರಣಗಳಲ್ಲಿ ಪರಿಹಾರ ಹೆಚ್ಚಳ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕ್ರಿಮಿನಲ್ ಕೇಸ್ ಇದ್ದರೂ ಪಾಸ್ಪೋರ್ಟ್ ನವೀಕರಣ
ಬೆಂಗಳೂರು: ಪಾಸ್ಪೋರ್ಟ್ ನವೀಕರಣಕ್ಕೆ ಅರ್ಜಿ ಸಲ್ಲಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದ್ದರೆ ನವೀಕರಣಕ್ಕಾಗಿ ಸಂಬಂಧಪಟ್ಟ ಮ್ಯಾಜಿಸ್ಟ್ರೆಟ್ ಕೋರ್ಟ್ನಿಂದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕ್ರಿಮಿನಲ್ ಪ್ರಕರಣ ಬಾಕಿ ಇರುವ ಹಿನ್ನೆಲೆಯಲ್ಲಿ ಪಾಸ್ಪೋರ್ಟ್ ನವೀಕರಣಕ್ಕೆ ಮ್ಯಾಜಿಸ್ಟ್ರೆಟ್ ಅನುಮತಿ ಪಡೆಯುವಂತೆ ಸೂಚಿಸಿದ್ದ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿಯ ಕ್ರಮ ಪ್ರಶ್ನಿಸಿ ಮಾಜಿ ಶಾಸಕ ಅಶೋಕ್ ಖೇಣಿ ಸಹೋದರ ಸಂಜಯ್ ಖೇಣಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ, ಹೊಸದಾಗಿ ಪಾಸ್ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿದ್ದರೆ ಮಾತ್ರ ಮ್ಯಾಜಿಸ್ಟ್ರೆಟ್ ಕೋರ್ಟ್ನಿಂದ ಅನುಮತಿ ಪಡೆಯಬೇಕಾಗುತ್ತದೆ, ಪಾಸ್ಪೋರ್ಟ್ ನವೀಕರಣಕ್ಕೆ ಅನುಮತಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಜತೆಗೆ, ಪಾಸ್ಪೋರ್ಟ್ ನವೀಕರಣಕ್ಕಾಗಿ ಸಂಬಂಧಪಟ್ಟ ಮ್ಯಾಜಿಸ್ಟ್ರೆಟ್ ಅವರಿಂದ ಅನುಮತಿ ಪಡೆಯುವಂತೆ ಅರ್ಜಿದಾರ ಸಂಜಯ್ ಖೇಣಿಗೆ ಸೂಚಿಸಿ ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ 2022ರ ಜ.12 ಮತ್ತು ಮಾ.11ರಂದು ಹೊರಡಿಸಿದ್ದ ಸಂವಹನಗಳನ್ನು ರದ್ದುಪಡಿಸಿರುವ ಹೈಕೋರ್ಟ್, ಪಾಸ್ಪೋರ್ಟ್ ನವೀಕರಿಸಿಕೊಳ್ಳಲು ಅರ್ಜಿದಾರರು ಅರ್ಹರಾಗಿದ್ದರೆ ಮ್ಯಾಜಿಸ್ಟ್ರೆಟ್ ಕೋರ್ಟ್ನಿಂದ ಅನುಮತಿ ಪಡೆಯುವಂತೆ ಸೂಚಿಸದೆ ಅವರ ಅರ್ಜಿಯನ್ನು ತುರ್ತಾಗಿ ಪರಿಗಣಿಸಬೇಕು ಎಂದು ಪಾಸ್ಪೋರ್ಟ್ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.