ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಒತ್ತಾಯ: ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಪ್ರತಿಭಟನೆ

Karnataka Grameen Bank employees protest Mandya
Published on

ಮಂಡ್ಯ: ಹೊರ ಗುತ್ತಿಗೆ ನೌಕರರ ನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು, ಅಧಿಕಾರಿಗಳ ಸಂಘ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಇಒಡಿ ಪ್ರಮಾಣಿಕರಗಳನ್ನು ತಕ್ಷಣವೇ ನಿಲ್ಲಿಸಬೇಕು. 12ನೇ ದ್ವೀಪಕ್ಷೀಯ ಒಪ್ಪಂದ ಮತ್ತು 9ನೇ ಜಂಟಿ ಮಸೂದೆಯ ಪ್ರಕಾರ 2024 ಜು.8ರಂದು ಡಿಎಫ್‌ಎಸ್ ಹೊರಡಿಸಿದ ಆದೇಶವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು. ಮಾನವ ಸಂಪನ್ಮೂಲ ಸಮಗ್ರ ಮೌಲ್ಯ ಮಾಪನಗೊಳಿಸಬೇಕೆಂದು ಆಗ್ರಹಿಸಿ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಮುಕುಂದ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ನಿವೃತ್ತ ನೌಕರರ ಸಂಘದ ಸತ್ಯಾನಂದಸ್ವಾಮಿ, ಕೆ.ಟಿ.ರಘುನಾಥ್, ಅಧಿಕಾರಿ ಸಂಘದ ಜಂಟಿ ಕಾರ್ಯದರ್ಶಿ ನಾಗರಾಜು, ಎಚ್.ಸಿ.ನಾಗರಾಜು, ಕಾರ್ಯದರ್ಶಿ ಎನ್.ಮಹಾದೇವಸ್ವಾಮಿ, ಸಿ.ಆರ್.ಶ್ರೀಧರ್, ನೌಕರರ ಸಂಘದ ಕೆ.ಪುಟ್ಟಸ್ವಾಮಿ, ನಟರಾಜು, ಕೆ.ಬಿ.ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net