

ಬೆಂಗಳೂರು: ರಾಜ್ಯದ ನಾನಾ ಅಕಾಡೆಮಿಗಳಿಗೆ ಸರ್ಕಾರ ಈಗಾಗಲೇ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಇದೀಗ ಸದಸ್ಯರನ್ನೂ ನೇಮಿಸಿ ಆದೇಶ ಹೊರಡಿಸಿದೆ. ನೇಮಕಗೊಂಡಿರುವವರ ಹೆಸರುಗಳು ಇಂತಿವೆ.
ಲಲಿತಕಲಾ ಅಕಾಡೆಮಿ: ರಾಘವೇಂದ್ರ, ಲ. ಅಶೋಕ, ವೀರೇಶ ರುದ್ರಸ್ವಾಮಿ, ಮಹದೇವ ದಂಡಿನ್, ಶ್ರೀಕಾಂತರಾಜ್, ಡಾ. ಸೌಮ್ಯಾ ಮಂಜುನಾಥ್; ಜಾನಪದ ಅಕಾಡೆಮಿ: ಸಿಎಂ ನರಸಿಂಹಮೂರ್ತಿ, ಜೋಗಿಲ ಸಿದ್ದರಾಜು, ಡಾ. ನಾರಾಯಣಪ್ಪ, ಶಿಲ್ಪಾ ಮುಡಬಿ, ಮಹಾರುದ್ರಪ್ಪ, ವೀರಪ್ಪ ಇಟಗಿ; ಸಾಹಿತ್ಯ ಅಕಾಡೆಮಿ: ನಲ್ಲತಂಬಿ, ದತ್ತಗುರು ಹೆಗಡೆ, ಮಡಿವಾಳಪ್ಪ, ಕುಮಾರಿ ವನಜಾ, ಬಸವರಾಜ ಜಗದಂಪಿ, ದೀಪ್ತಿ, ಡಾ. ಪ್ರಸನ್ನಕುಮಾರ್.
ನಾಟಕ ಅಕಾಡೆಮಿ: ಬಿಸಲೆಹಳ್ಳಿ ಸೋಮಶೇಖರ್, ಎ.ಪಿ. ಸೂರನಾಯಕ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ರಾಚಪ್ಪ ಬಡಿಗೇರ; ಸಂಗೀತ-ನೃತ್ಯ ಅಕಾಡೆಮಿ: ಶೋಭಾ ಶಶಿಕುಮಾರ್, ಸಿ.ಕೆ. ಅಂಜಲಿ ಶೆಟ್ಟಿ, ಸೌಮ್ಯಶ್ರೀ, ನಾಗೇಶ ಹೆಬ್ಬಾಳೆ, ಸ್ಮತಿ ಹರಿತ್ಸ; ಅರೆಭಾಷೆ ಸಾಹಿತ್ಯ-ಸಂಸ್ಕೃತಿ ಅಕಾಡೆಮಿ: ಡಾ. ದಯಾನಂದ ಕೆ.ಸಿ, ಎ.ಟಿ. ಕುಸುಮಾಧರ, ಡಾ. ವಿಶ್ವನಾಥ ಬದಿಕಾನ, ಜಯಪ್ರಕಾಶ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ, ಭಾರತೀ ರಮೇಶ್; ತುಳು ಸಾಹಿತ್ಯ ಅಕಾಡೆಮಿ: ಪಿ.ಎಂ. ರವಿ, ನರೇಂದ್ರ ಕೆರೆಕಾಡು, ಸರ್ವೋತ್ತಮ ಶೆಟ್ಟಿ, ಸಂತೋಷಕುಮಾರ್, ಕಲಾವತಿ; ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಡಾ. ಕಿಶೋರ್.