ಸಿದ್ದಗಂಗಾ ಶ್ರೀಗಳ ಹೆಸರಿಡಲು ಕೊನೆಗೂ ಒಪ್ಪಿದ ರಾಜ್ಯ ಸರ್ಕಾರ

Swamiji_Name
Published on

ತುಮಕೂರು: ನಗರ ರೈಲು ನಿಲ್ದಾಣಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಗೆ ಕೊನೆಗೂ ಸರ್ಕಾರವು ಒಪ್ಪಿಗೆ ಸೂಚಿಸಿದೆ. 4&5 ತಿಂಗಳಿನಿಂದ ಕೇಂದ್ರ&ರಾಜ್ಯ ಸರ್ಕಾರದ ನಡುವೆ ಈ ತಿಕ್ಕಾಟ ಜಾರಿಯಲ್ಲಿತ್ತು.

ರಾಜ್ಯದಲ್ಲಿ 1900 ಕೋಟಿ ರೂ. ವೆಚ್ಚದಲ್ಲಿ 61 ಅಮೃತ್​ ಭಾರತ್​ ರೈಲ್ವೆ ಸ್ಟೇಷನ್​ಗಳ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ 16 ಕೋಟಿ ರೂ., ವೆಚ್ಚದಲ್ಲಿ ಗುಬ್ಬಿ ಹಾಗೂ 24 ಕೋಟಿ ರೂ.. ವೆಚ್ಚದಲ್ಲಿ ತಿಪಟೂರು ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೆ, 89 ಕೋಟಿ ರೂ. ವೆಚ್ಚದಲ್ಲಿ ತುಮಕೂರು ನಗರದ ರೈಲ್ವೆ ನಿಲ್ದಾಣವನ್ನು ಸಿದ್ದಗಂಗಾ ಮಠದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಬಟವಾಡಿ, ಬಡ್ಡಿಹಳ್ಳಿ , ಮೈದಾಳ ಗೇಟ್​ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಸೋಮಣ್ಣ, ತುಮಕೂರು ನಗರ ರೈಲ್ವು ನಿಲ್ದಾಣಕ್ಕೆ ಸಿದ್ದಗಂಗಾ ಶ್ರೀಗಳ ಹೆಸರಿಡಲು ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಪತ್ರ ಕಳುಹಿಸಿದ್ದು ಇದೀಗ ಸರ್ಕಾರವು ಒಪ್ಪಿಕೊಂಡಿದ್ದು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಸಚಿವ ಸೋಮಣ್ಣ ಈ ಸಂದರ್ಭದಲ್ಲಿ ಅಭಿನಂದಿಸಿದರು.

127 ಕೋಟಿ ಮೊತ್ತದ ಕಾಮಗಾರಿ

ನಗರದ ಬಟವಾಡಿ ರೈಲ್ವೆ ಗೇಟ್​ 43.37 ಕೋಟಿ ರೂ., ಬಡ್ಡಿಹಳ್ಳಿ ಗೇಟ್​ ಬಳಿ 26.75 ಕೋಟಿ ರೂ. ಹಾಗೂ ಮೈದಾಳ ಗೇಟ್​ 57.31 ಕೋಟಿ ರೂ. ಸೇರಿ ಒಟ್ಟು 127.43 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ (ಆರ್​ಒಬಿ) ನಿಮಾರ್ಣ ಮಾಡಲಾಗುತ್ತಿದ್ದು, ಮುಂದಿನ 18 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಸಚಿವ ಸೋಮಣ್ಣ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net