ಚಿತ್ರಕಲಾ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ; ಲಲಿತಕಲಾ ಅಕಾಡೆಮಿಯಿಂದ ಸ್ಪರ್ಧೆ ಆಯೋಜನೆ | Lalithakala Academy

Untitled design - 2025-03-10T161934.196
Published on

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯ( Lalithakala Academy) 60 ವರ್ಷದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಚಿತ್ರ ಕಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಕರ್ನಾಟಕದ ಕಲಾ ಶಾಲೆಗಳಲ್ಲಿ ಯಾವುದೇ ಹಂತದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಪೂರ್ವ ಸಿದ್ಧತೆಗಾಗಿ ಏಪ್ರಿಲ್​ 30ರವರೆಗೆ ಕಾಲವಕಾಶವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ತಾವು ರಚಿಸಿರುವ ಕಾಲಕೃತಿಗಳ 2 ಫೋಟೊಗಳನ್ನು ಮತ್ತು ಅಭ್ಯಾಸ ಮಾಡುತ್ತಿರುವ ಚಿತ್ರಕಲಾ ಶಾಲೆಯ ಪ್ರಾಂಶುಪಾಲರಿಂದ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿಗಳನ್ನು ಗೂಗಲ್‌ ಫಾರ್ಮ್​​ನಲ್ಲಿ ಭರ್ತಿಮಾಡಿ ಅಕಾಡೆಮಿ ಕೋರಿರುವ ಅಗತ್ಯ ದಾಖಲೆಗಳನ್ನು ಅನ್‌ಲೈನ್‌ ಮುಖಾಂತರ ಗೂಗಲ್‌ನಲ್ಲಿ ಲಗತ್ತಿಸುವುದು. (ವೆಬ್​ಸೈಟ್​​: www.lalitkala.karnataka.gov.in ) ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08022480297ಯನ್ನು ಸಂಪರ್ಕಿಸಿ. ಸ್ಪರ್ಧೆಯಲ್ಲಿ ಅತ್ಯುತ್ತಮ ಚಿತ್ರ ರಚಿಸಿದ ವಿದ್ಯಾರ್ಥಿಗಳಿಗೆ (ಕನಿಷ್ಠ 6, ಗರಿಷ್ಠ 10) 15,000 ರೂಪಾಯಿ ನಗದಿನೊಂದಿಗೆ ಸ್ಮರಣಿಕೆ, ಪ್ರಮಾಣಪತ್ರವನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net