

ಮಂಡ್ಯ: ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಸಾಹಿತ್ಯ, ನಿರ್ದೇಶಕ, ಸಂಗೀತ, ಗಾಯಕ, ನೃತ್ಯಪಟು ಹಾಗೂ ಸಾಹಸ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕಲಾವಿದರ ಹಿತರಕ್ಷಣೆಗಾಗಿ ಕರ್ನಾಟಕ ಫಿಲಂ ಅಸೋಸಿಯೇಷನ್ ಅನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ. ಆದ್ದರಿಂದ ಚಿತ್ರರಂಗದ ಎಲ್ಲ ಸ್ತರದ ಕಲಾವಿದರು ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಎಂ.ಎಸ್.ರವೀಂದ್ರ ಮನವಿ ಮಾಡಿದರು.
ಪ್ರತಿ ಸದಸ್ಯತ್ವಕ್ಕೆ 2 ಸಾವಿರ ರೂಗಳ ವಂತಿಗೆ ಸಂಗ್ರಹಿಸಿ ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು. ಆರ್ಥಿಕ ಸಂಕಷ್ಟಕ್ಕೀಡಾದ ಕಲಾವಿದರಿಗೆ ಆರೋಗ್ಯ ಭತ್ಯೆ ಹಾಗೂ ಆಹಾರ ಕಿಟ್ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.