ಇನ್ನಿಂಗ್ಸ್ ಮುನ್ನಡೆಗೆ ಕರ್ನಾಟಕ ಹೋರಾಟ

PRAKAR C
Published on

ಹುಬ್ಬಳ್ಳಿ: ಇಲ್ಲಿಯ ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ 19 ವಯೋಮಿತಿಯ ಕೂಚ್ ಬೆಹಾರ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್​ನಲ್ಲಿ ಆತಿಥೇಯ ಕರ್ನಾಟಕ, ಪ್ರವಾಸಿ ಮಧ್ಯಪ್ರದೇಶ ತಂಡದ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಹೋರಾಟ ನಡೆಸಿದೆ.

ಮಧ್ಯಪ್ರದೇಶ ತಂಡದ ಪ್ರಥಮ ಇನ್ನಿಂಗ್ಸ್ ಮೊತ್ತ 269 ರನ್​ಗೆ ಉತ್ತರವಾಗಿ ಶನಿವಾರ 2ನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ 6 ವಿಕೆಟ್ 227 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಪ್ರಕಾರ ಚತುರ್ವೆದಿ ಶತಕ (97ರನ್, 159 ಎಸೆತ, 14 ಬೌಂ., 1ಸಿ) ವಂಚಿತರಾದರೂ ಕರ್ನಾಟಕ ತಂಡ ಕುಸಿತಕ್ಕೆ ಒಳಗಾದಂತೆ ನೋಡಿಕೊಂಡರು. 7ನೇ ವಿಕೆಟ್ ಜೊತೆಯಾಟದಲ್ಲಿ ಧ್ರುವ ಪ್ರಭಾಕರ ಹಾಗೂ ನಾಯಕ ಧೀರಜ್ ಗೌಡ್ 31 ರನ್ ಸೇರಿಸಿದ್ದು ಇನ್ನಿಂಗ್ಸ್ ಮುನ್ನಡೆಯ ಆಸೆ ಮೂಡಿಸಿದ್ದಾರೆ.

ಮಧ್ಯಪ್ರದೇಶ ಪರ ವಿಷ್ಣು ಬರದ್ವಾಜ್ 5 ವಿಕೆಟ್ ಕಬಳಿಸಿ ಪರಿಣಾಮಕಾರಿ ಬೌಲರ್ ಎನಿಸಿದರು.

ಸಂಕ್ಷಿಪ್ತ ಸ್ಕೋರ್

ಮಧ್ಯಪ್ರದೇಶ ಪ್ರಥಮ ಇನ್ನಿಂಗ್ಸ್: 269 ರನ್ (ಅನಂತ ದುಬೆ 30, ಧೀರಜ್ ಗೌಡ 77ಕ್ಕೆ 6).

ಕರ್ನಾಟಕ ಪ್ರಥಮ ಇನ್ನಿಂಗ್ಸ್: 227ಕ್ಕೆ 6 (ಪ್ರಕಾರ ಚತುರ್ವೆದಿ 97, ಸಮಿತ್ ದ್ರಾವಿಡ್ 40, ಧ್ರುವ ಪ್ರಭಾಕರ 35ಅ, ಧೀರಜ್ ಗೌಡ 17ಅ, ವಿಷ್ಣು ಬರದ್ವಾಜ್ 45ಕ್ಕೆ 5).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net