ಮಾರ್ಚ್ 31ರಂದು ಕರ್ನಾಟಕ ಫ್ಯಾಷನ್ ಶೋ

Published on

ಮೈಸೂರು: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತಿನಿಂದ ಮಾ.31ರಂದು ನಗರದ ಪುರಭವನದಲ್ಲಿ ಕರ್ನಾಟಕ ಫ್ಯಾಷನ್ ಶೋ ಆಯೋಜಿಸಲಾಗಿದೆ ಎಂದು ಪರಿಷತ್ತಿನ ನಗರಾಧ್ಯಕ್ಷೆ ಮೌಲ್ಯ ಜೈಕುಮಾರ್ ತಿಳಿಸಿದರು.
ಅಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9ರವರೆಗೆ ನಗರದ ಪುರಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫ್ಯಾಷನ್ ಶೋನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಭಾವಚಿತ್ರವಿರುವ ನೆನಪಿನ ಕಾಣಿಕೆ, ಪ್ರಮಾಣಪತ್ರ, ಮೈಸೂರು ಪೇಟ, ಹಾರ, ಶಾಲು ನೀಡಿ ಗೌರವಿಸಲಾಗುವುದು. ಜತೆಗೆ ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ತಂಡದ ಹಿತೇಶ್, ದಿವ್ಯಾ ವಸಂತ, ಜಗದೀಶ್‌ಕುಮಾರ್ (ಜೆಕೆ), ಬಸುರಾಜು (ಬಸು) ಅವರಿಂದ ಹಾಸ್ಯ ಕಾರ್ಯಕ್ರಮ ಇರಲಿದೆ ಎಂದು ಹೇಳಿದರು. ಆಯೋಜಕರಾದ ಡಾ. ತೇಜಸ್ ಪೃಥ್ವಿರಾಜ್, ಹೇಮಲತಾ, ಮೂಗೂರು ಮಂಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net