ಮೈಸೂರಿನಲ್ಲಿ ಜೂನ್ 23ರಂದು ಕರ್ನಾಟಕ ಫ್ಯಾಷನ್ ಶೋ

Published on

ಮೈಸೂರು: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್‌ನಿಂದ ಜೂ.23ರಂದು ನಗರದಲ್ಲಿ ಕರ್ನಾಟಕ ಫ್ಯಾಷನ್ ಶೋ ಆಯೋಜಿಸಲಾಗಿದೆ ಎಂದು ಪರಿಷತ್‌ನ ಮಹಿಳಾ ಘಟಕದ ನಗರಾಧ್ಯಕ್ಷೆ ಡಾ.ಮೌಲ್ಯಾ ಜೈಕುಮಾರ್ ಹೇಳಿದರು.
ಪರಿಷತ್‌ನಿಂದ ಮೂರನೇ ವರ್ಷದ ಫ್ಯಾಷನ್ ಶೋ ಇದಾಗಿದ್ದು, ಸಾಂಸ್ಕೃತಿಕ ವಸ್ತ್ರ ಧರಿಸಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಬಹುದು. ಮಕ್ಕಳು, ಯುವಕರು, ವಯಸ್ಕರು, ಹಿರಿಯ ವಯಸ್ಕರ ನಾಲ್ಕು ವಿಭಾಗದಲ್ಲಿ ಶೋ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫ್ಯಾಷನ್ ಶೋನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಭಾವಚಿತ್ರ ಇರುವ ನೆನಪಿನ ಕಾಣಿಕೆ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಮಾಹಿತಿಗೆ ಮೊಬೈಲ್ ಸಂಖ್ಯೆ 8867688676 ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಪರಿಷತ್‌ನ ಕಾರ್ಯದರ್ಶಿ ಎಚ್.ಜಿ.ಶೋಭಾ, ಖಜಾಂಚಿ ತೇಜಸ್ ಪೃಥ್ವಿರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net