

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೇ ಒಂದೇ ತಿಂಗಳ ಅವಧಿಯಲ್ಲಿ 16 ಬಾರಿ ಭೂಮಿ ಕಂಪಿಸಿರುವುದು ಆತಂಕ ಉಂಟುಮಾಡಿದೆ. ಈ ಪರಿಸ್ಥಿತಿಯಲ್ಲಿ ಒಂದೆಡೆ ಸರ್ಕಾರ ನಾಗರಿಕರಲ್ಲಿ ಅರಿವು ಮೂಡಿಸುವ ಜತೆಗೆ ಸಂಭವನೀಯ ದುರಂತ ಎದುರಿಸುವುದಕ್ಕಾಗಿ ಜಿಲ್ಲಾಡಳಿತಗಳನ್ನು ಸಜ್ಜುಗೊಳಿಸುತ್ತಿದ್ದರೆ, ಮತ್ತೊಂದೆಡೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಭೂಕಂಪಪೀಡಿತ ಪ್ರದೇಶಕ್ಕೆ ಹೋಗಿ ಜನರಲ್ಲಿ ಧೈರ್ಯತುಂಬುವ ಕೆಲಸ ಮಾಡಿಲ್ಲವೆಂಬ ಆರೋಪಗಳಿವೆ. ಸೆ.4 ರಿಂದ ವಿಜಯಪುರದಲ್ಲಿ 8 ಹಾಗೂ ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ಏಳು ಬಾರಿ ಭೂಮಿ ಕಂಪಿಸಿದೆ. ಹಾಸನ ಜಿಲ್ಲೆಯಲ್ಲಿ ಒಮ್ಮೆ ಭೂಮಿ ನಡುಗಿದೆ. ಭೂಕಂಪನದ ತೀವ್ರತೆ ಹೆಚ್ಚಿಲ್ಲದಿರುವುದರಿಂದ ಯಾವುದೇ ಹಾನಿ ಸಂಭವಿಸಿಲ್ಲ.
ಯಾವ ಮಾದರಿ?: ಭೂಕಂಪದಲ್ಲೂ 2 ರೀತಿ ಇದೆ. ಮೇಲಿನಿಂದ ಕೆಳಗೆ ನಡುಗುವ ಪ್ರಕ್ರಿಯೆ ಹೆಚ್ಚು ಅಪಾಯಕಾರಿ. ಅಡ್ಡಡ್ಡ ಅಲುಗಾಡುವುದರಿಂದ ಹೆಚ್ಚಿನ ಅಪಾಯ ಆಗುವುದಿಲ್ಲ. ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಆಗುತ್ತಿರುವ ಕಂಪನ ಎರಡನೇ ಮಾದರಿಯದ್ದೆಂದು ಹೇಳಲಾಗುತ್ತಿದೆ.
ಜಿಲ್ಲಾಡಳಿತ ಸಜ್ಜು: ಸಂಭವನೀಯ ಭೂ ಕಂಪನ ಎದುರಿಸುವ ಸಂಬಂಧ ವಿಜಯಪುರ, ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳ ಜಿಲ್ಲಾಡಳಿತಗಳನ್ನು ಸರ್ಕಾರ ಸಜ್ಜುಗೊಳಿಸುತ್ತಿದೆ. ಆರೋಗ್ಯ, ಪೊಲೀಸ್, ಅಗ್ನಿಶಾಮಕ, ಪ್ರಕೃತಿ ವಿಕೋಪ ನಿರ್ವಹಣಾ ತಂಡ, ಸಂಬಂಧಪಟ್ಟ ಇಲಾಖೆಗಳನ್ನು ಸಜ್ಜಾಗಿರುವಂತೆ ಸೂಚಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ನಿರ್ದೇಶನ ನೀಡಲಾಗಿದೆ.
ಶ್ರೀ ತಜ್ಞರ ತಂಡ: ಭೂ ಕಂಪನದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವ ಹೊಣೆಗಾರಿಕೆಯನ್ನು ಹೈದರಾಬಾದ್ನ ನ್ಯಾಷನಲ್ ಜಿಯೋ ಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ಗೆ ವಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ತಜ್ಞರ ತಂಡ ಅಧ್ಯಯನ ನಡೆಸಲಿದೆ. ವರದಿ ಬರುವ ತನಕ ನಿಖರ ಕಾರಣ ಕಂಡುಹಿಡಿಯುವುದು ಕಷ್ಟ.
ಸಾರ್ವಜನಿಕರಿಗೆ ಸಲಹೆ
* ಭೂಕಂಪನವಾದಾಗ ಕಟ್ಟಡಗಳಿಂದ ಹೊರಬರಬೇಕು. ಕಾಲ್ತುಳಿತವಾಗದಂತೆ ಎಚ್ಚರಿಕೆ ವಹಿಸಬೇಕು
* ಮರಗಳು, ಕಟ್ಟಡದ ಗೋಡೆ, ವಿದ್ಯುತ್ ಕಂಬ ಇರುವ ಜಾಗದಲ್ಲಿ ನಿಲ್ಲಬಾರದು
* ಗ್ಯಾಸ್, ವಿದ್ಯುತ್, ನೀರಿನ ಸಂಪರ್ಕ ನಿಲ್ಲಿಸಬೇಕು
* ವಾಹನ ಚಾಲನೆ ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಬೇಕು. ಬಯಲಿನಲ್ಲಿ ಹೋಗಿ ನಿಲ್ಲಬೇಕು
* ಮಕ್ಕಳು ಶಾಲೆಯಲ್ಲಿದ್ದರೆ ತಕ್ಷಣ ಟೇಬಲ್, ಕುರ್ಚಿ, ಬೆಂಚುಗಳ ಕೆಳಗೆ ಅಡಗಿಕೊಳ್ಳಬೇಕು
* ಯಾವುದೇ ಕಾರಣಕ್ಕೂ ಲ್ಟ್ಿಗಳನ್ನು ಬಳಸಬಾರದು
* ಟಿವಿ, ಆಕಾಶವಾಣಿಗಳಲ್ಲಿ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿರಬೇಕು
ಪ್ರಾಥಮಿಕ ಮಾಹಿತಿ ತಜ್ಞರ ಪ್ರಾಥಮಿಕ ಮಾಹಿತಿ ಪ್ರಕಾರ ಮಳೆಗಾಲದಲ್ಲಿ ಭೂಮಿ ಕಂಪಿಸುವುದು ಸರ್ವೇ ಸಾಮಾನ್ಯ. ಭಾರೀ ಮಳೆಯಾಗಿ ಅಂತರ್ಜಲ ಮರುಪೂರಣವಾಗುವಾಗ ಭೂಮಿಯ 10 ರಿಂದ 12 ಕಿಮೀ ಒಳಭಾಗದಲ್ಲಿ ಜಲಕಂಪನ ಆಗುತ್ತದೆ. ಅದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೂ 2 ದಿನದಲ್ಲಿ ಬರಲಿರುವ ಹೈದರಾಬಾದ್ನ ಎನ್ಜಿಆರ್ಐ ತಂಡ ಅಧ್ಯಯನ ಮಾಡಿ ವರದಿ ನೀಡಿದ ನಂತರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ.
ಭೂ ಕಂಪನ ಪ್ರದೇಶದಲ್ಲಿ ಮುಂಜಾಗ್ರತೆ ಕೈಗೊಂಡಿದ್ದು, ಜಾಗೃತಿ ಕಾರ್ಯಕ್ರಮ ನಡೆಸಿದ್ದೇವೆ. ಅಧ್ಯಯನಕ್ಕಾಗಿ ಎನ್ಜಿಆರ್ಐಗೆ ಮನವಿ ಮಾಡಿದ್ದೇವೆ. ವರದಿ ಬಂದ ನಂತರವಷ್ಟೇ ನಿಖರ ಕಾರಣ ತಿಳಿಯುತ್ತದೆ. ಆದರೆ ಸದ್ಯಕ್ಕೆ ಅದು ಹಾನಿಕಾರಕವೇನಲ್ಲ. | ಡಾ. ಮನೋಜ್ ರಾಜನ್ ಆಯುಕ್ತರು, ಪ್ರಕೃತಿ ವಿಕೋಪ ಉಸ್ತುವಾರಿ ಕೋಶ
ಭೂ ಕಂಪನದ ಇತಿಹಾಸ * ವಿಜಯಪುರ ಜಿಲ್ಲೆಯಲ್ಲಿ ಮೊದಲ ಬಾರಿಗೆ 1653&54ರಲ್ಲಿ ಭೂಕಂಪನ ಆಗಿದೆ. ಆದರೆ ನಿಖರ ದಿನಾಂಕ ಲಭ್ಯವಿಲ್ಲ. * 1973ರ ನವೆಂಬರ್ 15ರಮದು ಸಿಂಧಗಿ ತಾಲೂಕಿನ ಭೂಕಂಪನವಾಗಿದೆ * 1993ರಲ್ಲಿ ಕಿಲಾರಿಯಲ್ಲಿ ಬೃಹತ್ ಪ್ರಮಾಣದ ಭೂಕಂಪನ ಆಗಿ ಕಲಬುರಗಿ, ಬೀದರ್, ವಿಜಯಪುರ ಜಿಲ್ಲೆಯಲ್ಲಿ ಹಾನಿಯಾಗಿದೆ * 2006&09ರ ಅವಧಿಯಲ್ಲಿ ಚಿಂಚೋಳಿ ತಾಲೂಕಿನ ಹಸರಗುಂಡಗಿ, ಯಲಕಪಲ್ಲಿ, ಯಾಂಪಳ್ಳಿ, ಚಿಮ್ಮನಚೂಡ್ಗಳಲ್ಲಿ ಭೂಮಿಯೊಳಗೆ ಶಬ್ದ ಬರುತ್ತಿತ್ತು * 2010&14ರಲ್ಲಿ ವಿಜಯಪುರ ಜಿಲ್ಲೆಯಲ್ಲಿ 25 ಬಾರಿ ಸಣ್ಣ ಪ್ರಮಾಣದ ಭೂಕಂಪನವಾಗಿದೆ. * 2016&17ರಲ್ಲಿ ಬೀದರ್ ಜಿಲ್ಲೆಯಲ್ಲಿ 3 ಬಾರಿ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯಲ್ಲಿ 2 ಬಾರಿ ಭೂ ಕಂಪನವಾಗಿದೆ
ಕಂಪನಕ್ಕೆ ಕಾರಣವೇನು?
ನಿರಂತರ ಭೂ ಕಂಪನಕ್ಕೆ ನಿಖರ ಕಾರಣ ಇನ್ನೂ ತಿಳಿದಿಲ್ಲ. ಭೂಮಿಯ ಒಳಪದರ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬದಲಾಗಿದೆ. ಪದರಗಳು ಬೇರೆ ಬೇರೆ ಇರುವುದರಿಂದ ಈ ರೀತಿ ಆಗುತ್ತಿದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ನೆಲವೆಲ್ಲ ಪಾಟಿಕಲ್ಲು ಮತ್ತು ಸುಣ್ಣದ ಶಿಲಾಹಾಸುಗಳಿಂದ ಆವರಿಸಿದೆ. ಮಳೆ ನೀರು ಜಿನುಗಿದಾಗ ನೆಲದಾಳದಲ್ಲಿ ಟೊಳ್ಳಾಗುತ್ತದೆ. ಶಿಲಾಸ್ತರಗಳು ಹೊಂದಾಣಿಕೆಗೆ ಅತ್ತಿತ್ತ ಸುಳಿದಾಡುತ್ತವೆ. ಅದರಿಂದ ಕಂಪನವಾಗುತ್ತದೆ. ಆದರೆ ಅದರ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ. ಜಲಾಶಯ ಇರುವಲ್ಲಿ ಭೂ ಕಂಪನದ ಕೇಂದ್ರಬಿಂದು ಇರುತ್ತದೆ ಎಂಬ ಮಾತಿದೆ. ಮಳೆಗಾಲದಲ್ಲಿ ಹೆಚ್ಚು ನೀರು ಸಂಗ್ರಹವಾದಾಗ ಕಂಪನ ಸಹಜ. ಕೊಯ್ನಾ ಜಲಾಶಯದ ಸುತ್ತಮುತ್ತ ಇಂತಹ ಕಂಪನ ಆಗುತ್ತಿರುತ್ತದೆ. ಸುಣ್ಣದ ಕಲ್ಲಿನ ಗಣಿ ಇರುವುದರಿಂದ ಉಷ್ಣಾಂಶ ಹೆಚ್ಚಾಗಿ ಮಳೆ ಜಾಸ್ತಿಯಾಗಿದ್ದರಿಂದ ಕಂಪನ ಆಗಿದೆಯೇ ಎಂಬ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿರುವುದು ಹೆಚ್ಚಾಗಿ ಕಪು$್ಪಮಣ್ಣಿನ ಭೂಮಿ. ಒಳಭಾಗದಲ್ಲಿ ಗ್ರಾನೈಟ್ ಸಹ ಇದೆ.