ಅಕ್ರಮ ಪಡಿತರ ಅಕ್ಕಿ ಸಾಗಾಣೆಗೆ ಕಡಿವಾಣ ಹಾಕಿ

01 gvt 01
Published on

ಗಂಗಾವತಿ: ಅಕ್ರಮ ಪಡಿತರ ಅಕ್ಕಿ ಸಾಗಾಣೆಗೆ ಕಡಿವಾಣ ಹಾಕಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಗರ ಘಟಕದ ಸದಸ್ಯರು (ನಾರಾಯಣಗೌಡ ಬಣ) ನಗರದ ತಾಲೂಕಾಡಳಿತದ ಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ನಗರ ಯುವ ಘಟಕದ ಅಧ್ಯಕ್ಷ ಯಮನೂರ್ ಭಟ್ ಮಾತನಾಡಿ, ಬಡ ಜನರ ಅನ್ನಭಾಗ್ಯ ಯೋಜನೆ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ರಾತ್ರೋರಾತ್ರಿ ಬೇರೆ ಜಿಲ್ಲೆಗಳಿಗೆ ಸಾಗಿಸಲಾಗುತ್ತಿದೆ. ನ್ಯಾಯಬೆಲೆ ಅಂಗಡಿಯಿಂದಲೇ ಪಡಿತರ ಅಕ್ಕಿ ಸಂಗ್ರಹಿಸುವ ಜಾಲವಿದ್ದು, ಹಣಕ್ಕಾಗಿ ಕೆಲವರು ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾಡಳಿತದವರಿಗೂ ದೂರು ನೀಡಿದರೂ ಆಹಾರ ಇಲಾಖೆ ನಿರೀಕ್ಷರೂ ನಿರ್ಲಕ್ಷಿಸುತ್ತಿದ್ದು, ಕ್ರಮ ಕೈಗೊಳ್ಳುವಲ್ಲಿ ವಿಲವಾಗಿದ್ದಾರೆ. ಪಡಿತರ ಅಕ್ಕಿ ಸಾಗಾಣೆ ಜಾಲಕ್ಕೆ ಕಡಿವಾಣ ಹಾಕದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಉಪತಹಸೀಲ್ದಾರ್ ಮಂಜುನಾಥ ನಂದನ್‌ರಿಗೆ ಸಲ್ಲಿಸಿದರು.

ತಾಲೂಕು ಘಟಕದ ಅಧ್ಯಕ್ಷ ಕೆ.ಚಂದ್ರಶೇಖರ್ ಶೆಟ್ಟಿ, ಪದಾಧಿಕಾರಿಗಳಾದ ಚನ್ನಬಸವ ಮಾನ್ವಿ, ಹುಲುಗಪ್ಪ ಕೊಜ್ಜಿ, ಶರಣಪ್ಪ ಭಜಂತ್ರಿ, ಬಸವರಾಜ ಭಜಂತ್ರಿ, ಹನುಮೇಶ, ಪವನಕುಮಾರ ಗಡ್ಡಿ, ಗವಿಸಿದ್ದಯ್ಯ ಹಿರೇಮಠ, ಇಸ್ಮಾಯಿಲ್ ಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net