ಸರ್ಕಾರ ಕಚೇರಿಗಳಿಗೆ ಸ್ವಂತ ಕಟ್ಟಡ ಬಳಸಿ

background (3)
ಲಿಂಗಸುಗೂರು ಎಸಿ ಕಚೇರಿ ಎಫ್‌ಡಿಸಿ ಅಮರೇಶಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ಮಾದೇಶ ಸರ್ಜಾಪುರ, ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಲ, ಉಪಾಧ್ಯಕ್ಷ ಬಸವರಾಜ ಪೇರಿ, ಗೌರವಾಧ್ಯಕ್ಷ ರಮೇಶ ಸುಂಕದ, ಸಂಘಟನಾ ಕಾರ್ಯದರ್ಶಿ ಮುತ್ತಣ್ಣ ಗುಡಿಹಾಳ, ಪ್ರಮುಖರಾದ ಮಹಾಂತೇಶ ಹೂಗಾರ, ರಾಜು ರಡ್ಡಿ, ಆಂಜನೇಯ ನಾಯಕ, ಜೀವಾ ನಾಯ್ಕ, ಮೌನೇಶ ನಾಯಕ, ಬಸವರಾಜ ಗುಂಡಸಾಗರ, ಪ್ರಕಾಶ ಮಡ್ಡಿಕಾರ, ಸಂತೋಷ ಭೋವಿ, ಮಂಜುನಾಥ ಗಂಗಾವತಿ, ದುರುಗಪ್ಪ, ಈಶ್ವರ ವಿಶ್ವಕರ್ಮ ಇದ್ದರು.
Published on

ಲಿಂಗಸುಗೂರು: ಕಚೇರಿಗಳನ್ನು ಸ್ವಂತ ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಎಸಿ ಕಚೇರಿ ಎಫ್‌ಡಿಸಿ ಅಮರೇಶಗೆ ಸೋಮವಾರ ಮನವಿ ಸಲ್ಲಿಸಿದರು.

ಬಾಡಿಗೆ ಕಟ್ಟಡದಿಂದ ಹಣ ವ್ಯರ್ಥ

ಪಟ್ಟಣದಲ್ಲಿ ಹಳೆಯ ಗ್ರಂಥಾಲಯ, ತಾಲೂಕು ಪಂಚಾಯ್ತಿ, ಬಿಸಿಯೂಟ, ಪ್ರಥಮ ದರ್ಜೆ ಕಾಲೇಜು, ಬಾಲಕರ ವಸತಿ ನಿಲಯ, ಬಿಸಿಎಂ ಬಾಲಕಿಯರ ವಸತಿ ನಿಲಯ ಹಾಗೂ ಅನೇಕ ಕಟ್ಟಡಗಳು ಖಾಲಿ ಇವೆ. ಆದರೂ ಕಾರ್ಮಿಕ ಇಲಾಖೆ, ಬಿಸಿಎಂ, ಮಹಿಳಾ ವಸತಿ ನಿಲಯ, ಯೋಜನಾ ಪ್ರಾಧಿಕಾರ, ಅಬಕಾರಿ ಇಲಾಖೆ, ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ, ಸಿಡಿಪಿಒ, ಭೂ ಸೇನಾ ಸೇರಿ ಅನೇಕ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಪ್ರತಿ ತಿಂಗಳು ಲಕ್ಷಾಂತರ ರೂ. ಸರ್ಕಾರದ ಹಣ ವ್ಯರ್ಥವಾಗಿ ಪೋಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರ ನಿರ್ವಹಣೆಗೆ ಸರ್ಕಾರ ಹರಸಾಹಸ ಪಡುತ್ತಿದೆ. ಸ್ವಂತ ಕಟ್ಟಡಗಳನ್ನು ಬಳಸಿಕೊಂಡಾದ ಹಣ ಉಳಿತಾಯವಾಗಲಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net