ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹ

HN 29-2
Published on

ವಿಜಯಪುರ: ಡಾ.ಸರೋಜಿನಿ ಮಹಿಷಿ ವರದಿ ಕೂಡಲೇ ಜಾರಿಯಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಮ್ಮ ಬಣ) ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಶೇಷರಾವ್ ಮಾನೆ ಮಾತನಾಡಿ, ಡಾ.ಸರೋಜಿನಿ ಮಹಿಷಿ ವರದಿಯಿಂದ ಕನ್ನಡಿಗರಿಗೆ ಉದ್ಯೋಗ ಅವಕಾಶಗಳು ಸಿಗುತ್ತವೆ. ಜಿಲ್ಲಾಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ಕೂಡಲೇ ರಚಿಸಿ ಸರ್ಕಾರ ತೀವ್ರಗತಿಯಲ್ಲಿ ಕಾನೂನು ಸಚಿವಾಲಯಕ್ಕೆ ಆದೇಶ ಮಾಡಿ ಜಾರಿಗೆ ತರಲು ಬದ್ಧವಾಗಬೇಕು. ಖಾಸಗಿ ರಂಗದಲ್ಲೂ ‘ಸಿ’ ಹಾಗೂ ‘ಡಿ’ ವರ್ಗದ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿರಿಸಬೇಕು. ಆಂಧ್ರಪ್ರದೇಶ ಮಾದರಿಯಲ್ಲಿ ಜಿಲ್ಲಾ ಅನುಷ್ಠಾನ ಸಮಿತಿ ರಚಿಸಿದಾಗ ಮಾತ್ರ ನಾಡಿನಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲು ಸಾಧ್ಯ ಎಂದರು.

ಜಿಲ್ಲಾ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಸಮಾಜವಾದಿ ಜನತಾ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ರಜಾಕ್ ಪಟೇಲ್, ನಗರ ಉಪಾಧ್ಯಕ್ಷ ಬಸು ರಾಠೋಡ, ನಗರ ಕಾರ್ಯದರ್ಶಿ ಯಲ್ಲಪ್ಪ ಮಾದರ, ಎಂ.ಎಸ್. ಶಿರಸಂಗಿ, ಸಾಹೇಬಲಾಲ್ ದಳವಾಯಿ, ಎಚ್.ಎ. ತೆಗ್ಗಳ್ಳಿ, ಬಾಬು ಲಮಾಣಿ, ನಗರ ಉಪಾಧ್ಯಕ್ಷೆ ಮಹಾದೇವಿ ತಾಂಬಾ, ಕರವೇ ನಗರ ಕಾರ್ಯದರ್ಶಿ ನಂದಾ ಮಾಶಾಳ, ಶಾಲಂಬಿ ನಾಲಬಂದ, ಹುಸೇನಬಿ ಝಳಕಿ, ಸಜಾಬಾಯಿ ಮಾನೆ, ಅಮೋಗಿ ಮಾನೆ, ಭೀಮಾಶಂಕರಯ್ಯ ವಿರಕ್ತಮಠ, ಸಂತೋಷ ಕವಲಗಿ, ವಸಂತರಾವ ಕುಲಕರ್ಣಿ, ಕೃಷ್ಣಾಜಿ ಕುಲಕರ್ಣಿ, ಹಣಮಂತ ಲಕ್ಷಾನಟ್ಟಿ, ಸಂಗಪ್ಪ ಮಣ್ಣೊಡ್ಡರ, ಥಾವರು ನಾಯಕ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net