ಜೀವನ ತ್ಯಾಗ ಮಾಡಿದ ಹುತಾತ್ಮರನ್ನು ಆರಾಧಿಸಿ

29 hrr
Published on

ಹರಿಹರ: ಅಸ್ಪೃಶ್ಯತೆಯ ಸಂಕೋಲೆಯಿಂದ ಬಿಡಿಸಲು ಜೀವನ ತ್ಯಾಗ ಮಾಡಿದ ಮಹಾತ್ಮರನ್ನು ನಾವು ಆರಾಧಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುನಿಕೃಷ್ಣಪ್ಪ ಆಗ್ರಹಿಸಿದರು.

ನಗರದ ಮೈತ್ರಿವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಮತ್ತು ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಧರ್ಮದ ಹೆಸರಿನಲ್ಲಿ ಆಚರಿಸುವ ಅಮಾನವೀಯ ಪರಂಪರೆ, ಪದ್ಧತಿಗಳನ್ನು ವಿರೋಧಿಸಿದವರು ಪೊ›.ಬಿ. ಕೃಷ್ಣಪ್ಪ. ಅವರನ್ನು ಕರ್ನಾಟಕದ ಅಂಬೇಡ್ಕರ್ ಎಂದೇ ಕರೆಯಲಾಗುತ್ತದೆ. ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಪಾಲು ನೀಡಲು ಸರ್ಕಾರ ಒಪ್ಪದ ಕಾರಣ 1955 ರಲ್ಲಿ ಅಂಬೇಡ್ಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂತಹ ಮಹಾತ್ಮರ ಆದರ್ಶವನ್ನು ನಾವೂ ಅನುಸರಿಸಬೇಕು, ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದರು.

ರಾಜ್ಯ ಸಂಚಾಲಕ ಡಿ.ಆರ್. ಪಾಂಡುರಂಗ ಸ್ವಾಮಿ ಮಾತನಾಡಿ, ರಾಜ್ಯದ ಸಮಸ್ತ ದಲಿತರಲ್ಲಿ ಹೋರಾಟದ ಕಿಚ್ಚು ಮರುಕಳಿಸಲು ಪೊ›.ಬಿ. ಕೃಷ್ಣಪ್ಪ ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕು. ಇವರ ಸಮಾಧಿ ಸ್ಥಳವಿರುವ ಮೈತ್ರಿವನಕ್ಕೆ ನಾಡಿನ ದಲಿತರು ಭೇಟಿ ನೀಡಬೇಕು ಎಂದರು.

ರಾಜ್ಯ ಸಂಘಟನಾ ಸಂಚಾಲಕರಾದ ಕೊಡಿಗಲ್ ರಮೇಶ್, ತರೀಕೆರೆ ಎನ್. ವೆಂಕಟೇಶ್, ಬಿ. ಮಾರುತಿ ಹೊಸಮನಿ, ಎ.ಎಲ್. ಭಾಸ್ಕರ್, ಟಿ.ಎನ್. ಗೋವಿಂದಪ್ಪ, ಎಂ. ಶಿವಾನಂದ ಸಾವಳಗಿ, ಭರಮಪ್ಪ, ಟಿ.ಎಂ. ಅಂಜಯ್ಯ, ಎಚ್. ಮುನಿಯಪ್ಪ, ಸುನೀತಾ ರಾಜ್, ಎಂ.ವಿ. ಭವಾನಿ ಬಾಳೆಹೊನ್ನೂರು, ತಿಪ್ಪಮ್ಮ, ಜಿಲ್ಲಾ ಸಂಚಾಲಕರಾದ ಹರಮಗಟ್ಟ ರಂಗಪ್ಪ, ಆರ್. ಶ್ರೀನಿವಾಸ್ ಮಾತನಾಡಿದರು.

ರಾಜ್ಯ ಸಮಿತಿ ಸದಸ್ಯರಾದ ಆರ್. ಶಿವಕುಮಾರ್, ಎಂ.ಎಸ್. ಶಂಕರ್, ಸತೀಶ್ ಕಂಟಲಗೆರೆ, ತಾಲೂಕು ಸಮಿತಿ ಸದಸ್ಯರಾದ ಆರ್.ಪಿ. ಯಮನೂರು, ಎನ್.ಜಿ. ಸಂತೋಷ್, ಕರಿಬಸಪ್ಪ ಗಂಗನರಸಿ, ಎ.ಕೆ. ಪ್ರಕಾಶ್, ತಿಪ್ಪೇಶ ದೇವರೆಡ್ಡಿ, ರುದ್ರೇಶ ಚನ್ನಗಿರಿ, ಗಣೇಶ್, ಹರೀಶ್ ಬೇತೂರು, ಚಿಕ್ಕಬಿದರಿ ನಾಗಪ್ಪ, ಫಕ್ಕಿರೇಶ್ ಯಾದವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net