

ಬೆಳ್ತಂಗಡಿ: ಕರ್ನಾಟಕ ದಲಿತ ಚಳವಳಿಗೆ ಭಾರತದಲ್ಲಿ ಶ್ರೇಷ್ಠ ಸ್ಥಾನಮಾನ ಇದೆ. ಈ ಚಳುವಳಿ ಕೇವಲ ದಲಿತರಿಗೆ ಮಾತ್ರವಲ್ಲದೆ ದಲಿತೇತರ ಸಮಾಜದ ಎಲ್ಲ ಸ್ಥರಗಳಲ್ಲೂ ವೈಚಾರಿಕತೆ ಬಿತ್ತುವ ಮೂಲಕ ನ್ಯಾಯ ಒದಗಿಸುವ ಕಾರ್ಯ ಮಾಡಿದೆ ಎಂದು ಮೈಸೂರು ವಿಶ್ವ ಮೈತ್ರಿ ಬೌದ್ಧ ವಿಹಾರದ ಡಾ.ಕಲ್ಯಾಣಸಿರಿ ಭಂತೇಜಿ ಹೇಳಿದರು.
ಬೆಳ್ತಂಗಡಿಯಲ್ಲಿ ಸೋಮವಾರ ಕರ್ನಾಟಕ ದಲಿತ ಚಳವಳಿ 50ರ ಸಂಭ್ರಮ ಸಮಾವೇಶ-2025 ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶಾಸಕ ಹರೀಶ್ ಪೂಂಜ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿದರು. ಕರ್ನಾಟಕ ದಲಿತ ಚಳವಳಿ 50ರ ಸಂಭ್ರಮ ಸಮಾವೇಶ-2025 ಸಮಿತಿ ಅಧ್ಯಕ್ಷ ಬಿ.ಕೆ.ವಸಂತ್ ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮಾಜಿ ಸದಸಸ್ಯ ಕೆ.ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ನಿವೃತ್ತ ಡಿ.ವೈ.ಎಸ್.ಪಿ. ಸುಹೈಲ್ ಆಹಮದ್, ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಎ., ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಸದಸ್ಯ ಜಗದೀಶ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಸತೀಶ್ ಕಾಶಿಪಟ್ಣ, ಕೃಷ್ಣಪ್ಪ ಸುಣ್ಣಾಜೆ, ಪ್ರೇಮಿ ಫರ್ನಾಂಡಿಸ್, ಸಂತೋಷ್ ಕುಮಾರ್, ರಾಜಾ ಚಂಡ್ತಿಮಾರ್, ಶಿವಕುಮಾರ್, ಪಿ.ಎಸ್.ಶ್ರೀನಿವಾಸ್, ಅಕ್ಬರ್ ಬೆಳ್ತಂಗಡಿ, ಜಯಕೀರ್ತಿ ಜೈನ್ ಧರ್ಮಸ್ಥಳ, ಶೀನ ಬಂಗೇರ ಲಾಯಿಲ, ಶೇಖರ್ ಎಲ್., ನಜೀರ್, ಈಶ್ವರ ಬೈರ, ಸಿ.ಕೆ.ಚಂದ್ರಕಲಾ, ದಲಿತ ಸಂಘರ್ಷ ಸಮಿತಿ ಮಾಜಿ ಸಂಚಾಲಕರಾದ ಚೆನ್ನಕೇಶವ ಬೆಳ್ತಂಗಡಿ, ಎಸ್.ಬೇಬಿ ಸುವರ್ಣ, ಪದ್ಮನಾಭ ಗರ್ಡಾಡಿ, ಎನ್.ಕೆ.ಸುಂದರ ಲಾಯಿಲ, ಅಣ್ಣು ಸಾಧನಾ ಪದ್ಮುಂಜ, ಪಿ.ಕೆ.ರಾಜು , ಪಡಂಗಡಿ, ಸಂಜೀವ ಆರ್.ಬೆಳ್ತಂಗಡಿ, ಕಿರಣ್ ಕುಮಾರ್ ಪುದುವೆಟ್ಟು, ಶ್ರೀಧರ ಎಸ್.ಕಳೆಂಜ, ವೆಂಕಣ್ಣ ಕೊಯ್ಯೂರು, ಕೆ.ನೇಮಿರಾಜ್ ಕಿಲ್ಲೂರು, ರಮೇಶ್ ಆರ್.ಬೆಳ್ತಂಗಡಿ, ರಮೇಶ್ ಉಮಿಯ, ಸಮಿತಿ ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ, ಪ್ರಧಾನ ಕಾರ್ಯದರ್ಶಿ ಅಚುಶ್ರೀ ಬಾಂಗೇರು ಉಪಸ್ಥಿತರಿದ್ದರು. ಅಂಬೇಡ್ಕರ್ ಹಾಗೂ ಪ್ರೊ.ಬಿ.ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮೆರವಣಿಗೆ ಸ್ಮರಣ ಸಂಚಿಕೆ ಕೃತಿ ಬಿಡುಗಡೆ ಮಾಡಲಾಯಿತು.ಸುಕೇಶ್ ಮಾಲಾಡಿ ಸ್ವಾಗತಿಸಿದರು. ರಾಜು ಕಕ್ಕೆಪದವು ನಿರೂಪಿಸಿದರು. ಶ್ರೀಧರ ಎಸ್.ಕಳೆಂಜ ಹಕ್ಕೊತ್ತಾಯ ಮಂಡಿಸಿದರು.
ಸ್ವಾತಂತ್ರೃಪೂರ್ವ ಮತ್ತು ನಂತರದ ಕಾಲಘಟ್ಟದಲ್ಲಿ ಕರಾವಳಿಯಲ್ಲಿ ದೈವಾರಾಧನೆ ಮೂಲಕ ಸಾಮಾಜಿಕ ಸ್ವಾಸ್ಥೃ ಕಂಡುಕೊಂಡ ಸಮಾಜ ದಲಿತ ಸಮಾಜ. ಆದರೆ ಡಿಸಿ ಮನ್ನಾ ಭೂಮಿ ದಲಿತರಿಗೆ ಸಿಗುವಲ್ಲಿ ಅನೇಕ ಪ್ರಯತ್ನಗಳು ನಡೆದರೂ ಫಲಿಸಿಲ್ಲ. ಈ ಜಿಲ್ಲೆಯ ಎಲ್ಲ ಶಾಸಕರನ್ನು ಒಟ್ಟುಗೂಡಿಸಿ ಸಚಿವ ಕೃಷ್ಣೇಗೌಡರೊಂದಿಗೆ ಸಭೆ ಕರೆದು ಸರ್ಕಾರ ನಿರ್ಣಯ ಕೈಗೊಳ್ಳುವಲ್ಲಿ ಸಂಪೂರ್ಣ ಪ್ರಯತ್ನ ಮಾಡಲಾಗುವುದು. ಜಾತಿ ಚಿಂತನೆ ಬದಿಗೊತ್ತಿ ನಾವೆಲ್ಲ ಹಿಂದು ಎಂಬ ಭಾವನೆಯಡಿ ಸಾಗಬೇಕಾದ ಅವಶ್ಯಕತೆಯಿದೆ. ಹರೀಶ್ ಪೂಂಜ, ಶಾಸಕ