ಹರಿಯಾಣಕ್ಕೆ ತೆರಳಿದ ಕರ್ನಾಟಕ ಸೈಕ್ಲಿಂಗ್ ತಂಡ

New cycling new
Published on

ಹುಬ್ಬಳ್ಳಿ : ಹರಿಯಾಣದ ಸೋನಿಪಥನಲ್ಲಿ ಏ. 25ರಿಂದ ನಡೆಯಲಿರುವ ಖೇಲೋ ಇಂಡಿಯಾ ವುಮೆನ್ಸ್ ಲೀಗ್ ಹಾಗೂ ಏಷಿಯನ್ ರೋಡ್ ಸೈಕ್ಲಿಂಗ್​ನ ಭಾರತೀಯ ತಂಡಕ್ಕೆ ಆಯ್ಕೆಯಾಗಿ ಹುಬ್ಬಳ್ಳಿಯಿಂದ ದೆಹಲಿ ಮುಖಾಂತರ ಕರ್ನಾಟಕ ತಂಡ ಸೋಮವಾರ ಪ್ರಯಾಣ ಬೆಳೆಸಿತು.

ಅನುಪಮಾ ಗುಳೇದ, ಪೂಜಾ ಮಠಪತಿ, ಕೀರ್ತಿ ನಾಯಕ, ಆಯಿಷಾ ಮೋಮಿನ್, ಉದಯ ಗುಳೇದ, ಯಲಗೂರೇಶ ಗಡ್ಡಿ ಅವರು ತಂಡದಲ್ಲಿ ಇದ್ದಾರೆ. ಅವರೊಂದಿಗೆ ಕರ್ನಾಟಕ ತಂಡದ ಮುಖ್ಯ ತರಬೇತುದಾರ ವಿಠ್ಠಲ ಬೋರ್ಜಿ, ಮ್ಯಾನೇಜರ್ ಸೈಯದ್ ಮೋಮೀನ್ ಇದ್ದರು.

ಕರ್ನಾಟಕ ರಾಜ್ಯ ಅಮೇಚ್ಯೂರ್ ಸೈಕ್ಲಿಂಗ್ ಅಸೋಸಿಯೇಶನ್ ಉಪಾಧ್ಯಕ್ಷ ಮುತ್ತಪ್ಪ ಕುರಿಯರ್, ಸಹ ಕಾರ್ಯದರ್ಶಿ ದಿನೇಶ ಜೈನ್, ಜಿಲ್ಲಾ ಅಸೋಸಿಯೇಶನ್​ನ ನವೀನ ಚಿಪ್ರೆ ಅವರು ತಂಡವನ್ನು ಬೀಳ್ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net