ಕರ್ನಾಟಕ ಕಲ್ಚರಲ್ ಫೌಂಡೇಶನ್ ದಶಮಾನೋತ್ಸವ ಅಂ.ರಾ. ಸಮಾವೇಶ ಅಡ್ಯಾರ್ ಗಾರ್ಡನ್‌ನಲ್ಲಿ 10 ಜೋಡಿಗೆ ಸಾಮೂಹಿಕ ವಿವಾಹ

MNG--19 MAY kcf
Published on

ಮಂಗಳೂರು: ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ನ ದಶಮಾನೋತ್ಸವ ಅಂಗವಾಗಿ ಡಿಸೆನಿಯಮ್ ಅಂತರ್‌ರಾಷ್ಟ್ರೀಯ ಸಮಾವೇಶ ಹಾಗೂ 10 ಜೋಡಿಗೆ ಸಾಮೂಹಿಕ ವಿವಾಹ ನಗರದ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಭಾನುವಾರ ಜರುಗಿತು.


ಕೆಸಿಎಫ್ ಅಂತರ್‌ರಾಷ್ಟ್ರೀಯ ವೇದಿಕೆಯ ಕೋಶಾಧಿಕಾರಿ ಅಲಿ ಮುಸ್ಲಿಯಾರ್ ಬಹರೈನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಹತ್ತು ವರ್ಷಗಳ ಹಿಂದೆ ಬೇಕಲ್ ಉಸ್ತಾದ್ ಸ್ಥಾಪಿಸಿದ ಕೆಸಿಎಫ್ ಇಂದು ಪ್ರಪಂಚದ ವಿವಿಧ ದೇಶಗಳಿಗೆ ವ್ಯಾಪಿಸಿದ್ದು, ಬಲಿಷ್ಠ ಸಂಘಟನೆಯಾಗಿ ಬೆಳೆದಿದೆ ಎಂದರು.
ಭಾರತದ ಗ್ರಾಂಡ್ ಮುಫ್ತಿ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಕೆಸಿಎಫ್ ದಶಮಾನೋತ್ಸವ ನೆನಪಿಗಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹೊರತರಲಾದ ನೆನಪಿನ ಸಂಚಿಕೆಯನ್ನು ಅನಾವರಣಗೊಳಿಸಿದರು.


ಕೆಸಿಎಫ್ ದಶಮಾನೋತ್ಸವ ಸಮ್ಮೇಳನ ಸಮಿತಿಯ ಅಧ್ಯಕ್ಷ ಹಾಜಿ ಅಬೂಬಕರ್ ರೈಸ್ಕೋ ಅಧ್ಯಕ್ಷತೆ ವಹಿಸಿದ್ದರು. ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ದುಅ ನಿರ್ವಹಿಸಿದರು. ತಲಕ್ಕಿ ಶಿಹಾಬುದ್ದೀನ್ ತಂಙಳ್, ಅಬ್ದುರ್ರಹ್ಮಾನ್ ಸಾದಾತ್ ತಂಙಳ್, ಜಲಾಲುದ್ದೀನ್ ತಂಙಳ್, ಮಲ್ ಜಅ ಅಬ್ದುರ್ರಹ್ಮಾನ್ ಶಹೀರ್ ತಂಙಳ್, ಜಮಲುಲೈಲಿ ಕಾಜೂರು ತಂಙಳ್, ಮುಷ್ತಾಕ್ ಚಟ್ಟಕ್ಕಲ್ ತಂಙಳ್,
ಸಯ್ಯದ್ ಹಾಮೀಮ್ ತಂಙಳ್ , ಇಸ್ಮಾಯಿಲ್ ತಂಙಳ್ ಉಜಿರೆ ನಿಖಾಹ್ ನೇತೃತ್ವ ವಹಿಸಿದ್ದರು.


ಅಬೂಸ್ವಾಲಿಹ್ ಸಖಾಫಿ ಪೂನೂರು ನಿಖಾಹ್ ಖುತುಬ ನಿರ್ವಹಿಸಿದರು. ಕೆಎಂಜೆ ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿ ಅಬೂ ಸುಫ್ಯಾನ್ ಇಬ್ರಾಹಿಂ ಮದನಿ ಪ್ರಧಾನ ಭಾಷಣ ಮಾಡಿದರು. ಎಸ್‌ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ದಿಕ್ಸೂಚಿ ಭಾಷಣ ಮಾಡಿದರು. ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಶುಭ ಹಾರೈಸಿದರು. ರಾಜ್ಯ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಶಾಫಿ ಸಅದಿ, ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಹಾಜಿ ಮುಮ್ತಾಝ್ ಅಲಿ ಕೃಷ್ಣಾಪುರ, ಅಂತರ್‌ರಾಷ್ಟ್ರೀಯ ವೇದಿಕೆಯ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್ ಮೊದಲಾದವರು ಉಪಸ್ಥಿತರಿದ್ದರು.


ಅಸ್ಸಯ್ಯಿದ್ ಝೈನುಲ್ ಆಬಿದೀನ್ ಎಮ್ಮೆಮಾಡು ಒಮಾನ್ ಸ್ವಾಗತಿಸಿದರು, ಜಿಎಂ ಸುಲೈಮಾನ್ ಹಾಫಿಳ್ ಅಲ್‌ಹಿಮಮಿ ಕಿರಾತ್ ಪಠಿಸಿದರು.
ಸಮ್ಮೇಳನ ಸ್ವಾಗತ ಸಮಿತಿಯ ನಿರ್ವಾಹಕ ಕಾರ್ಯದರ್ಶಿ ಸಲೀಂ ಕನ್ಯಾಡಿ ವಂದಿಸಿದರು.ಮಹಮ್ಮದ್ ಆಶಿಕ್ ಮುಳ್ಳ್‌ಹರಿ ಹೆಚ್‌ಕಲ್ಲು ಮತ್ತು ಮುಹಮ್ಮದ್ ಜುನೈದ್ ಅದನಿ ಕಾರ್ಯಕ್ರಮ ರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net