ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ: ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿಕೆ

B C PATIL MINISTER
Published on

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲಿದೆ, ನಿರ್ನಾಮವಾಗಿದೆ. ಕೂಸು ಹುಟ್ಟುವ ಮುನ್ನ ಕುಲಾವಿ ಎಂಬ ಗಾದೆಯಂತೆ ಆ ಪಕ್ಷದವರು ಮುಂದಿನ ಮುಖ್ಯಮಂತ್ರಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಲೇವಡಿ ಮಾಡಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಬಹುಮತ ಬರಬೇಕು. ನಂತರ ಮುಖ್ಯಮಂತ್ರಿ ವಿಚಾರ. ಆದರೆ ಮುಂದಿನ ಬಾರಿಯೂ ಬಿಜೆಪಿಯೇ ಅಡಳಿತಕ್ಕೆ ಬರಲಿದೆ. ರಾಜ್ಯದಲ್ಲಿ ಪ್ರತಿಯೊಬ್ಬ ಶಾಸಕನೂ ಮುಖ್ಯಮಂತ್ರಿ ಹುದ್ದೆಗೆ ಅರ್ಹ ಎಂದು ಹೇಳಿದರು.

ಸಚಿವ ಯೋಗೇಶ್ವರ್ ದೆಹಲಿಗೆ ತೆರಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ಅವರು ಸಚಿವರಾಗಿದ್ದು, ಇಲಾಖೆ ಕೆಲಸದ ನಿಮಿತ್ತ ತೆರಳಿರಬಹುದು ಎಂದು ಹೇಳಿದರು.

ಜಾರಕಿಹೊಳಿಗೆ ಸ್ಥಾನಮಾನ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಕೆಲವರು ಪಿತೂರಿ ಮಾಡಿ ಅವರನ್ನು ಸಿಲುಕಿಸಿಹಾಕಿದ್ದಾರೆ. ಅವರು ನಿರ್ದೋಷಿಯಾಗಿ ಹೊರಬಂದ ಮೇಲೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ. ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಶಾಸಕ ರಘುಪತಿ ಭಟ್ ಜತೆಗಿದ್ದರು.

ಎಲ್ಲ ಜನಪ್ರತಿನಿಧಿಗಳು ಉಡುಪಿಯ ಮಾದರಿಯಲ್ಲಿ ಹಡಿಲು ಭೂಮಿ ಕೃಷಿಗೆ ಉತ್ತೇಜನ ನೀಡಿದರೆ ರಾಜ್ಯಾದ್ಯಂತ ಈ ಸಮಸ್ಯೆ ಬಗೆಹರಿಯಲಿದೆ. ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಕೋವಿಡ್‌ನಿಂದ ಸ್ಥಗಿತಗೊಂಡಿತ್ತು. ಉಡುಪಿಯಿಂದ ಮತ್ತೆ ಪ್ರಾರಂಭವಾಗಿದೆ.

ಬಿ.ಸಿ.ಪಾಟೀಲ್, ಕೃಷಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net