

ಹಾರೂಗೇರಿ: ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಷೇರುದಾರರಿಗೆ ಶೇ.೧೩ರಷ್ಟು ಲಾಭ ನೀಡುವುದರ ಜತೆಗೆ ೪೫ ಲಕ್ಷ ರೂ. ಲಾಭ ಗಳಿಸಿದೆ ಎಂದು ನಿರ್ದೆಶಕ ಹನುಮಂತ ಯಲಶೆಟ್ಟಿ ತಿಳಿಸಿದರು.
ಪಟ್ಟಣದ ವಿಠ್ಠಲ ರುಕ್ಮಿಣಿ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿಯ ೨೭ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಮು ಸಿಂಗಾಡಿ ಸಂಘದ ವಾರ್ಷಿಕ ವರದಿ ಮಂಡಿಸಿದರು. ಸೈದಪ್ಪ ಗದಾಡಿ, ನಿವೃತ್ತ ಪ್ರಾಧ್ಯಾಪಕ ವಿ.ಎಸ್.ಮಾಳಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮೇಶ ಪೋಳ, ಪುರಸಭೆ ನಾಮ ನಿರ್ದೇಶಿತ ಸದಸ್ಯ ಕಲ್ಲಪ್ಪ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಸುಭಾಷ ಸೂರ್ಯವಂಶಿ, ನಿರ್ದೇಶಕರಾದ ಮಹಾವೀರ ಅಸ್ತಿ, ರಾಮಪ್ಪ ಧರ್ಮಟ್ಟಿ, ಸುರೇಶ ಶೇಡಬಾಳ, ವಸಂತ ಹುಕ್ಕೇರಿ, ಕೃಷ್ಣಪ್ಪ ರಬಕವಿ, ಸತೀಶ ಗುರವ, ರಾಮಲಿಂಗ ಪತ್ತಾರ, ರಾಮು ಸಿಂಗಾಡಿ, ಸಾವಿತ್ರಿ ಧರ್ಮಟ್ಟಿ, ಬಾಗವ್ವ ಹಳ್ಳೂರ ಇತರರಿದ್ದರು.