ಜಂಬುನಾಥ ಕಂಚ್ಯಾಣಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ

Jambunath Kanchyani
Published on

ವಿಜಯಪುರ: ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು, ಮಕ್ಕಳ ಸಾಹಿತಿ, ಕವಿ ಜಂಬುನಾಥ ಕಂಚ್ಯಾಣಿ ಅವರಿಗೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ 2019-20ನೇ ಸಾಲಿನ ಗೌರವ ಪ್ರಶಸ್ತಿ ನೀಡಿ, ಗೌರವಿಸಿದೆ.

ಕಂಚ್ಯಾಣಿಯವರು ಕಳೆದ ಐದು ದಶಕಗಳಿಂದ ಮಕ್ಕಳ ಸಾಹಿತಿಯಾಗಿ, ಸಾಹಿತ್ಯ ಸಂಘಟಕರಾಗಿದ್ದು, ಮಕ್ಕಳ ಸಾಹಿತ್ಯದಲ್ಲಿ ಕತೆ, ಕವನ, ಕಾದಂಬರಿ, ನಾಟಕ, ಚರಿತ್ರೆ ಹಾಗೂ ಶಿಶುಪ್ರಾಸ ಮುಂತಾದ 30 ಗ್ರಂಥಗಳನ್ನು ರಚಿಸಿದ್ದಾರೆ.

ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ನೂತನ ಸಭಾ ಮಂದಿರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಪ್ರಶಸ್ತಿ ನೀಡಿ ಗೌರವಿಸಿದರು. ಹಿರಿಯ ಸಾಹಿತಿಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿ, ಶಂಕರ ಹಲಗತ್ತಿ ಅಕಾಡೆಮಿ ಅಧ್ಯಕ್ಷ ನವೀರ ಸವಣೂರ, ಯೋಜನಾಧಿಕಾರಿ ಭಾರತಿ ಶೆಟ್ಟರ, ನಿಂಗಣ್ಣ ಕುಂಟಿ ಉಪಸ್ಥಿತರಿದ್ದರು.

ಪ್ರಶಸ್ತಿಗೆ ಭಾಜನರಾದ ಜಂಬುನಾಥ ಕಂಚ್ಯಾಣಿ ಅವರನ್ನು ವೀರಶೈವ ಮಹಾಸಭಾ, ಮಕ್ಕಳ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ರಕ್ಷಣಾ ವೇದಿಕೆಯ ಅಭಿಮಾನಿಗಳ ಬಳಗ, ಸಮಾನ ಮನಸ್ಕರ ವೇದಿಕೆ, ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಬಳಗ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಮಕ್ಕಳ ಸಾಹಿತ್ಯ ಸಂಗಮದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net