ಉಪ ಕದನ ಗೆಲುವಿಗೆ ಗ್ಯಾರಂಟಿ ಶ್ರೀರಕ್ಷೆ

00
Published on

ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ ಕೈ ವಿರುದ್ಧ ಬಿಜೆಪಿ ಟೀಕಿಸುವುದನ್ನು ನಿಲ್ಲಿಸಲಿ

ಕೋಲಾರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಸೌಲಭ್ಯವು ಜನರಿಗೆ ತಲುಪುತ್ತಿದೆ ಎಂಬುದಕ್ಕೆ ಉಪ ಚುನಾವಣೆಯ ಲಿತಾಂಶವೇ ಸಾಕ್ಷಿ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಬಡವರ ಪರ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು. ಗ್ಯಾರಂಟಿ ಯೋಜನೆಗಳಿಂದಲೇ ಉಪ ಚುನಾವಣೆಯಲ್ಲಿ ಪಕ್ಷದ ಮೂರೂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ತಿಳಿಸಿದರು.

ಕಡು ಬಡವರಿಗೆ ನ್ಯಾಯ ಒದಗಿಸುವ ಕೆಲಸ ವಾಡಿದ್ದೇವೆ, ನಮ್ಮ ಕಾರ್ಯಕ್ರಮಗಳನ್ನು ಮೆಚ್ಚಿ ಮತದಾರರು ಮತ ನೀಡಿದ್ದಾರೆ. ಬಿಜೆಪಿ ಅವರು ಇನ್ನಾದರು ನಮ್ಮ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಲಿ ಎಂದು ಕಿವಿಮಾತು ಹೇಳಿದರು.

ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರಿನಲ್ಲಿ ಗೆಲ್ಲುವುದಾಗಿ ಈ ಮೊದಲು ಹೇಳಿದ್ದೆ. ಅಂದುಕೊಂಡಂತೆ ಉತ್ತಮ ಅಂತರದಲ್ಲಿ ಗೆಲುವು ಸಿಕ್ಕಿದೆ. ಜನ ಕಾಂಗ್ರೆಸ್ ಪರವಾಗಿದ್ದಾರೆ, ಗ್ಯಾರಂಟಿಗಳಿಂದ ನಮಗೆ ಅವರ ಆಶೀರ್ವಾದ ಸಿಕ್ಕಿದೆ. ₹56 ಸಾವಿರ ಕೋಟಿ ಬಡವರ ಕಲ್ಯಾಣಕ್ಕಾಗಿ ನೀಡಿದ್ದೇವೆ. ಬಿಜೆಪಿ ಎಷ್ಟೆೇ ಬೊಬ್ಬೆ ಹೊಡೆದರೂ ಜನರು ಅದಕ್ಕೆ ಮರುಳಾಗಿಲ್ಲ. ರಾಜಕೀಯವಾಗಿ ಬೇರೆ ಬೇರೆ ವಿಚಾರಗಳನ್ನು ಅವರು ಹರಿಬಿಟ್ಟರು. ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಜನ ನಮ್ಮ ಪರವಾಗಿದ್ದಾರೆ ಎನ್ನುವುದು ಈ ಫಲಿತಾಂಶದಿಂದ ಗೊತ್ತಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ಆಗಿಲ್ಲ. ಇದೆಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.

ಕಾಂಗ್ರೆಸ್‌ಗೆ ಸಿಕ್ಕಿದೆ ಜನಾದೇಶ ಐದು ಗ್ಯಾರಂಟಿಗಳ ಮೂಲಕ ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ದಿಟ್ಟ ಹೆಜ್ಜೆ ಇಟ್ಟಿದ್ದು ನಮ್ಮ ರಾಜ್ಯ ಸರ್ಕಾರ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ), ಆಹಾರ ಭದ್ರತಾ ಕಾಯಿದೆ ಜಾರಿ ವಾಡಿತು. ಎಲ್ಲ ವರ್ಗದವರಿಗೆ ಕೆಲಸ, ಆಹಾರ ಸಿಗಬೇಕೆಂಬುದು ಇದರ ಉದ್ದೇಶ ಎಂದು ಮುನಿಯಪ್ಪ ತಿಳಿಸಿದರು. ಇಬ್ಭಾಗದಿಂದ ಹಿನ್ನಡೆಮಹಾರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆ ಭರವಸೆ ಫಲ ನೀಡಲಿಲ್ಲವೇಕೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುನಿಯಪ್ಪ, ಮಹಾರಾಷ್ಟ್ರದ ವಿಚಾರ ನನಗೆ ಗೊತ್ತಿಲ್ಲ. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಇಬ್ಭಾಗವಾಗಿದ್ದರಿಂದ ಸಮಸ್ಯೆ ಆಗಿದೆ. ಇದರಿಂದ ಐಎನ್‌ಡಿಐಎ ಒಕ್ಕೂಟಕ್ಕೆ ಹಿನ್ನಡೆಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net