ಸಮುದಾಯ ಭವನಕ್ಕೆ ಮೂಲಸೌಕರ್ಯ ಒದಗಿಸಿ

8SND-03
ಭೋವಿ ಸಮುದಾಯ ಭವನಕ್ಕೆ ಮೂಲ ಸೌಲಭ್ಯ ಒದಗಿಸಲು ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ ವೇದಿಕೆ ತಾಲೂಕು ಸಮಿತಿಯು ಸಿಂಧನೂರು ನಗರಸಭೆ ಎಇಇ ನಾಸೀರ್‌ಗೆ ಮನವಿ ಸಲ್ಲಿಸಿತು. ವೇದಿಕೆ ತಾಲೂಕು ಸಮಿತಿ ಅಧ್ಯಕ್ಷ ದುರುಗಪ್ಪ, ಪ್ರಧಾನ ಕಾರ್ಯದರ್ಶಿ ವೀರೇಶ ಸಿದ್ರಾಂಪುರ, ಉಪಾಧ್ಯಕ್ಷ ನಾಗಪ್ಪ, ಖಜಾಂಚಿ ಮುತ್ತಣ್ಣ ಹಸ್ಮಕಲ್, ಯುವ ಘಟಕ ಅಧ್ಯಕ್ಷ ರಾಘವೇಂದ್ರ ಇದ್ದರು.
Published on

ಸಿಂಧನೂರು: ಭೋವಿ ಸಮುದಾಯ ಭವನಕ್ಕೆ ಮೂಲ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ ವೇದಿಕೆ ತಾಲೂಕು ಸಮಿತಿಯು ನಗರದ ನಗರಸಭೆ ಎಇಇಗೆ ನಾಸೀರ್‌ಗೆ ಮನವಿ ಸಲ್ಲಿಸಿತು.


ನಗರದ 19ನೇ ವಾರ್ಡಿನಲ್ಲಿ ಸಮುದಾಯ ನಿರ್ಮಾಣ ಮಾಡಲಾಗಿದೆ. ಆದರೆ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. 16 ಗುಂಟೆ ಜಾಗವಿದ್ದು, ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಬೇಕು. ನಗರದಲ್ಲಿ ಸಿದ್ಧರಾಮೇಶ್ವರ ಮೂರ್ತಿಯೊಂದಿಗೆ ವೃತ್ತ ನಿರ್ಮಾಣ ಮಾಡಬೇಕು. ಸಮುದಾಯ ಭವನಕ್ಕೆ ಕುಡಿವ ನೀರು ಸೇರಿ ಮೂಲ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದರು.


ವೇದಿಕೆ ತಾಲೂಕು ಸಮಿತಿ ಅಧ್ಯಕ್ಷ ದುರುಗಪ್ಪ, ಪ್ರಧಾನ ಕಾರ್ಯದರ್ಶಿ ವೀರೇಶ ಸಿದ್ರಾಂಪುರ, ಉಪಾಧ್ಯಕ್ಷ ನಾಗಪ್ಪ, ಖಜಾಂಚಿ ಮುತ್ತಣ್ಣ ಹಸ್ಮಕಲ್, ಯುವ ಘಟಕ ಅಧ್ಯಕ್ಷ ರಾಘವೇಂದ್ರ, ನಗರ ಘಟಕ ಅಧ್ಯಕ್ಷ ಶಿವಣ್ನ, ಅಡಿವೆಪ್ಪ, ವೀರೇಶ, ದುರುಗಪ್ಪ ಮಲ್ಲನಗುಡ್ಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net