ಕೂಚ್ ಬಿಹಾರ್ ಟ್ರೋಫಿ ಕಿಕೆಟ್, ತಮಿಳುನಾಡು ಮೇಲೆ ಹಿಡಿತ ಸಾಧಿಸಿದ ಕರ್ನಾಟಕ

IMG_20240106_075403.jpg
Published on

ಬೆಳಗಾವಿ: ಇಲ್ಲಿಯ ಕೆಎಸ್‌ಸಿಎ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾದ 19 ವಯೋಮಿತಿಯ ಕೂಚ್ ಬಿಹಾರ್ ಟ್ರೋಫಿ ಕಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಅತಿಥೇಯ ಕರ್ನಾಟಕ ತಂಡ ಪ್ರವಾಸಿ ತಮಿಳುನಾಡು ತಂಡದ ಮೇಲೆ ಹಿಡಿತ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ತಮಿಳುನಾಡು ತಂಡ ಮೊದಲ ಇನಿಂಗ್ಸ್‌ನಲ್ಲಿ 126ಕ್ಕೆ ಆಲ್‌ಔಟ್ ಆಯಿತು. ಬ್ಯಾಟ್ಸಮನ್‌ಗಳಾದ ಅಕ್ಷಯ್ ಆರ್. 29, ಅಭಿನವ ಕನ್ನನ 24 ರನ್, ವಿ.ಎಸ್. ಕಾರ್ತಿಕ 20 ರನ್ ಗಳಿಸಿ ಕೆಲಹೊತ್ತು ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತದ್ದು ಬಿಟ್ಟರೆ ಉಳಿದ ಆಟಗಾರಿಂದ ರನ್ ಹರಿದು ಬರಲಿಲ್ಲ. ಕರ್ನಾಟಕದ ಅಗಸ್ತ್ಯ ರಾಜು 4 ವಿಕೆಟ್ ಪಡೆದರು. ಸಮಿತ ದ್ರಾವಿಡ 3 ವಿಕೆಟ್ ಹಾಗೂ ಸಮರ್ಥ ಎನ್. 2 ವಿಕೆಟ್ ಕಬಳಿಸಿ, ಮಿಂಚಿದರು. ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ದಿನದಾಟದ ಮುಕ್ತಾಯಕ್ಕೆ 1 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿದೆ. ಕಾರ್ತಿಕ್ ಎಸ್.ಯು 51 (57) ರನ್, ಹರ್ಷಿಲ್ ಧರ್ಮಾನಿ 18 ರನ್ ಗಳಿಸಿ, ಬ್ಯಾಟಿಂಗ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net