ಕರ್ಣಾಟಕ ಬ್ಯಾಂಕ್‌ಗೆ ಪ್ರಥಮ ತ್ರೈಮಾಸಿಕದಲ್ಲಿ 370.70 ಕೋಟಿ ರೂ.ಲಾಭ

mng-3aug-ShriKrishnan
Published on




ಮಂಗಳೂರು : ಕರ್ಣಾಟಕ ಬ್ಯಾಂಕ್ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ 370.70 ಕೋಟಿ ರೂ.ನಿವ್ವಳ ಲಾಭ ಘೋಷಿಸಿದೆ.ಹಿಂದಿನ ವರ್ಷ ಈ ಅವಧಿಯಲ್ಲಿ 114.18 ಕೋಟಿ ರೂ.ಲಾಭ ದಾಖಲಿಸಿತ್ತು. ಇದರಿಂದ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ ಶೇ. 224.66 ಪ್ರಗತಿ ಸಾಧಿಸಿದಂತಾಗಿದೆ.
ಮಂಗಳೂರಿನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಬುಧವಾರ ನಡದ ಆಡಳಿತ ಮಂಡಳಿಯ ಸಭೆಯಲ್ಲಿ ವಿತ್ತೀಯ ವರ್ಷ 2023-24 ರ ಮೊದಲ ತ್ರೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು. ಬ್ಯಾಂಕಿನ ನಿರ್ವಹಣಾ ಲಾಭ ಜೂನ್‌ಅಂತ್ಯಕ್ಕೆ 601.17 ಕೋಟಿ ರೂ.ಹಾಗೂ ನಿವ್ವಳ ಬಡಿ ್ಡಆದಾಯ 814.68 ಕೋಟಿ ರೂ.ಗೆ ತಲುಪಿದೆ.
ಬ್ಯಾಂಕಿನ ಒಟ್ಟು ವ್ಯವಹಾರ ಶೇ.6.85ರ ವೃದ್ಧಿಯೊಂದಿಗೆ 1,48,449.27 ಕೋಟಿ ರೂ. ತಲುಪಿಸಿದೆ. ಹಿಂದಿನ ವರ್ಷ ಈ ಅವಧಿಯಲ್ಲಿ 1,38,936.17 ಕೋಟಿ ರೂ. ಇತ್ತು.ಠೇವಣಿಗಳ ಮೊತ್ತವು ಶೇ. 7.92ರ ವೃದ್ಧಿಯೊಂದಿಗೆ , 86,959.86 ಕೋಟಿ ರೂ.ಹಾಗೂ ಮುಂಗಡಗಳು ಶೇ.5.36 ರ ವೃದ್ಧಿಯೊಂದಿಗೆ 61,489.41 ಕೋಟಿ ರೂ.ಗೆ ಏರಿಕೆ ಕಂಡಿದೆ.
ಬ್ಯಾಂಕಿನ ಎಂಡಿ ಹಾಗೂ ಸಿಇಇ ಶ್ರೀಕೃಷ್ಣನ್ ಎಚ್ ಮಾತನಾಡಿ ‘ ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದ ಫಲಿತಾಂಶ ಸಂತಸ ತಂದಿದೆ. ಸುದೃಢವಾದ ಮೂಲಭೂತ ಅಂಶಗಳ ಭದ್ರ ಬುನಾದಿಯಲ್ಲಿರುವ ಕರ್ಣಾಟಕ ಬ್ಯಾಂಕ್, ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಪ್ರಗತಿಯ ಪಥದಲ್ಲಿ ದೃಢವಾದ ಹೆಜ್ಜೆ ಇಡುತ್ತಿದೆ .ಅನೇಕ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಬ್ಯಾಂಕ್ ವಿಶೇಷ ಗಮನ ಹರಿಸುತ್ತಿದೆ. ತನ್ಮೂಲಕ ಡಿಜಿಟಲ್ ಪ್ರಾಡಕ್ಟ್‌ಗಳನ್ನು ಗ್ರಾಹಕರಿಗೆ ಪರಿಚಯಿಸುವಲ್ಲಿ ಸಿಬ್ಬಂದಿಗಳೂ ಸಜ್ಜಾಗುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net