ನಿರಂತರ ಮುನ್ನಡೆ ಸಾಧಿಸುತ್ತಿರುವ ಹಣಕಾಸು ಸಂಸ್ಥೆ ಕರ್ಣಾಟಕ ಬ್ಯಾಂಕ್

IMG-20241028-WA0213
ಅರಕಲಗೂಡು ಬ್ರಾಹ್ಮಣ ಸಮುದಾಯ ಭವನಕ್ಕೆ ಕರ್ಣಾಟಕ ಬ್ಯಾಂಕ್ ಕೊಡುಗೆಯಾಗಿ ನೀಡಿರುವ ಲಿಫ್ಟ್‌ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಸಹಾಯಕ ಜನರಲ್ ಮ್ಯಾನೇಜರ್ ಟಿ.ಆರ್.ಅರುಣ್ ಮಾತನಾಡಿದರು. ಜಯಾನಂದ ದೇವಡಿಗ, ವಿ.ಕೆ.ಶ್ರೀಧರ್, ಎ.ಎನ್. ಕೃಷ್ಣಸ್ವಾಮಿ, ಸೀತಾರಾಮು ಇದ್ದರು.
Published on

ಅರಕಲಗೂಡು: ಕರ್ಣಾಟಕ ಬ್ಯಾಂಕ್ ನಿರಂತರವಾಗಿ ಪ್ರಗತಿ ಸಾಧಿಸುತ್ತ ಮುನ್ನಡೆದಿರುವ ಹಣಕಾಸು ಸಂಸ್ಥೆಯಾಗಿದೆ ಎಂದು ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ಟಿ.ಆರ್.ಅರುಣ್ ಹೇಳಿದರು.

ಪಟ್ಟಣದ ಬ್ರಾಹ್ಮಣ ಸಮುದಾಯ ಭವನಕ್ಕೆ ಬ್ಯಾಂಕ್ ಕೊಡುಗೆಯಾಗಿ ನೀಡಿರುವ ಲಿಫ್ಟ್ ಸೇವೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಬ್ಯಾಂಕ್ ಪ್ರತಿ ತ್ರೈಮಾಸಿಕದಲ್ಲೂ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಬ್ಯಾಂಕಿನ ಆದಾಯದಲ್ಲಿ ಶೇ.10ರಷ್ಟನ್ನು ಸಾಮಾಜಿಕ ಕಾರ್ಯಗಳಿಗೆ ಬಳಕೆ ಮಾಡಬೇಕು ಎಂಬ ತನ್ನಮೂಲ ಉದ್ದೇಶವನ್ನು ನಿರಂತರವಾಗಿ ಪಾಲನೆ ಮಾಡುತ್ತ ಬಂದಿದ್ದು, ಸಮುದಾಯ ಭವನಕ್ಕೆ ಈ ಹಿಂದೆ ಸೋಲಾರ್ ಯಂತ್ರವನ್ನು ನೀಡಿತ್ತು. ಇದೀಗ ಲಿಫ್ಟ್‌ಅನ್ನು ಕೊಡುಗೆಯಾಗಿ ನೀಡಿದೆ. ಬ್ಯಾಂಕ್ ವಿವಿಧ ಯೋಜನೆಗಳನ್ನು ರೂಪಿಸಿದ್ದು ಇದರ ಪ್ರಯೋಜನ ಪಡೆಯುವಂತೆ ಸಲಹೆ ನೀಡಿದರು.

ಬ್ಯಾಂಕ್‌ನ ಕ್ಲಸ್ಟರ್ ಮುಖ್ಯ ವ್ಯವಸ್ಥಾಪಕ ಟಿ. ಜಯಾನಂದ ದೇವಡಿಗ ಮಾತನಾಡಿ, ಪಟ್ಟಣದಲ್ಲಿ 64 ವರ್ಷಗಳ ಹಿಂದೆ ಪ್ರಾರಂಭವಾದ ಕರ್ಣಾಟಕ ಬ್ಯಾಂಕ್ ಶಾಖೆ ಇಂದು ಬೃಹತ್ ಆಗಿ ಬೆಳೆದು ವಾರ್ಷಿಕ 165 ಕೋಟಿ ರೂ.ವಹಿವಾಟು ನಡೆಸುತ್ತಿದೆ. ಬ್ಯಾಂಕ್ ಶೀಘ್ರದಲ್ಲೇ ನೂತನ ಕಟ್ಟಡಕ್ಕೆ ಸ್ಥಳಾಂತರವಾಗಲಿದ್ದು, ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೇವೆ ಒದಗಿಸಲಿದೆ ಎಂದು ಹೇಳಿದರು.

ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ವಿ.ಕೆ.ಶ್ರೀಧರ್, ಸಮುದಾಯ ಭವನದ ಅಧ್ಯಕ್ಷ ಕೆ.ನಂಜುಂಡಸ್ವಾಮಿ ಮಾತನಾಡಿದರು. ಸಮುದಾಯ ಭವನದ ಕಾರ್ಯದರ್ಶಿ ಎ.ಎಸ್.ಹಿರಣ್ಣಯ್ಯ, ಖಜಾಂಚಿ ಎಚ್.ಜಿ. ರಮೇಶ್ ಇದ್ದರು. ಹೈಕೋರ್ಟ್ ವಕೀಲ ಎ. ಎನ್. ಕೃಷ್ಣಸ್ವಾಮಿ, ಉದ್ಯಮಿ ಎ.ಎಸ್. ಸೀತಾರಾಮು , ಬ್ಯಾಂಕ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ವಾರ್ಷಿಕ ಸಭೆ: ಬ್ರಾಹ್ಮಣ ಸಮುದಾಯ ಭವನ ಸಮಿತಿಯ 2023-24 ನೇ ಸಾಲಿನ ವಾರ್ಷಿಕ ಸಭೆ ಅಧ್ಯಕ್ಷ ಕೆ. ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಸಭೆಯಲ್ಲಿ ಸಮಿತಿಯ ಕಾರ್ಯಚಟುವಟಿಕೆ, ವಾರ್ಷಿಕ ವರದಿ, ಜಮಾ-ಖರ್ಚು, 2024-25ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ, ಸಮಗ್ರ ಬೈಲಾ ತಿದ್ದುಪಡಿ ಕುರಿತು ಮಾಹಿತಿ ನೀಡಲಾಯಿತು.

ನಿರ್ದೇಶಕರಾದ ಎ.ಎಸ್.ರಾಮಸ್ವಾಮಿ, ಎ.ಎನ್.ಗಣೇಶಮೂರ್ತಿ, ಕೆ.ವಿ.ರಾಮಕೃಷ್ಣ, ನಾಗಮಣಿ ವೆಂಕಟೇಶಮೂರ್ತಿ, ಉಮಾ ಚಂದ್ರಶೇಖರ್, ಪಿ.ಎಸ್.ಪ್ರಸಾದ್, ಪ್ರಮುಖರಾದ ಎ.ಎಸ್.ರಂಗಸ್ವಾಮಿ, ಕೆ.ವಿ.ನಾಗೇಂದ್ರ, ಚಿದಂಬರಬಾಬು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net