

ಮೈಸೂರು: ವಿಜಯನಗರ ಎರಡನೇ ಹಂತದ ಸ್ಥಳಾಂತರಗೊಂಡ ಕರ್ಣಾಟಕ ಬ್ಯಾಂಕ್ ಶಾಖೆಯನ್ನು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್ ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬ್ಯಾಂಕ್‌ನೊಂದಿಗೆ ತಮ್ಮ ದೀರ್ಘಕಾಲದ ಒಡನಾಟ ಸ್ಮರಿಸಿದ ಅವರು, ಬ್ಯಾಂಕ್ ಸಿಬ್ಬಂದಿಯಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರೆಯುತ್ತಿದೆ ಎಂದು ಶ್ಲಾಘಿಸಿದರು.
ಕರ್ಣಾಟಕ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕಿ ಸುಮನಾ ಘಾಟೆ, ನೂರು ವರ್ಷದ ಇತಿಹಾಸವುಳ್ಳ ಬ್ಯಾಂಕ್‌ನ ಪ್ರಗತಿ, ಬ್ಯಾಂಕ್‌ನ ಡಿಜಿಟಲ್ ಸೇವೆಯ ಬಗ್ಗೆ ತಿಳಿಸಿದರು.
ಮೈಸೂರು ವಲಯದ ಮುಖ್ಯಸ್ಥ ಡಾ.ಟಿ.ಆರ್.ಅರುಣ್ ಮಾತನಾಡಿ, ಬ್ಯಾಂಕ್‌ನಲ್ಲಿ ಪರಿಚಯಿಸಿದ ಇತರ ಹೊಸ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಮೈಸೂರು ವಲಯದ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಆರ್.ಅಜಿತ್, ವಿಜಯನಗರ ಶಾಖೆಯ ಪ್ರಬಂಧಕ ಎಚ್.ಜಿ.ದರ್ಶನ್ ಇದ್ದರು.