

ಮಂಗಳೂರು : ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕರ್ಣಾಟಕ ಬ್ಯಾಂಕ್ ಒಎನ್‌ಡಿಸಿ (ಓಪನ್ ನೆಟ್‌ವರ್ಕ್ ಫಾರ್‌ಡಿಜಿಟಲ್ ಕಾಮರ್ಸ್) ಸೌಲಭ್ಯ ಘೋಷಿಸಿದೆ. ಕರ್ಣಾಟಕ ಬ್ಯಾಂಕ್ ಒಎನ್‌ಡಿಸಿ ನೆಟ್‌ವರ್ಕ್‌ನಲ್ಲಿ ಖರೀದಿದಾರ ಅಪ್ಲಿಕೇಶನ್‌ಗಳ ಮೂಲಕ ವೈಯಕ್ತಿಕ ಸಾಲಗಳನ್ನು ನೀಡುತ್ತಿದೆ. ಇದು ಬ್ಯಾಂಕ್‌ನ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆರಂಭದಲ್ಲಿ ಲಭ್ಯವಿದ್ದು, ಬಳಿಕ ಹೊಸ ಗ್ರಾಹಕರಿಗೆ ವಿಸ್ತರಣೆಯಾಗಲಿದೆ.
ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀಕೃಷ್ಣನ್ ಎಚ್ ಮಾತನಾಡಿ ‘ ಇದು ಬ್ಯಾಂಕಿನ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಕರ್ಣಾಟಕ ಬ್ಯಾಂಕ್ ಒಎನ್‌ಡಿಸಿಯ ಹಳಿಗಳಲ್ಲಿ ಏಕೀಕರಿಸಿದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಇದು ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ನಿರ್ಮಿಸಲು ಕೊಡುಗೆ ನೀಡುತ್ತದೆ ಎಂದು ತಿಳಿಸಿದ್ದಾರೆ.
ಕರ್ಣಾಟಕ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಮಾತನಾಡಿ ‘ ಹಣಕಾಸು ಸೇವೆಗಳಿಗಾಗಿ ಒಎನ್‌ಡಿಸಿಯ ಆರಂಭಿಕ ಅಳವಡಿಕೆದಾರರಾಗಲು ನಾವು ಉತ್ಸುಕರಾಗಿದ್ದೇವೆ ಎಂದರು.
ಒನ್‌ಎನ್‌ಡಿಸಿಯ ಎಂಡಿ ಮತ್ತು ಸಿಇಒ ಟಿ.ಕೋಶಿ ಮಾತನಾಡಿ ‘ಒನ್‌ಎನ್‌ಡಿಸಿಯ ಉದ್ದೇಶವು ಆರ್ಥಿಕ ಉತ್ಪನ್ನಗಳ ಕಡಿಮೆ-ವೆಚ್ಚದ ವಿತರಣೆಯನ್ನು ಸಕ್ರಿಯಗೊಳಿಸುವುದಾಗಿದೆ. ಕರ್ಣಾಟಕ ಬ್ಯಾಂಕ್‌ನ ಉಪಕ್ರಮವು ಒಎನ್‌ಡಿಸಿ ನೆಟ್‌ವರ್ಕ್ ಹೇಗೆ ಹಣಕಾಸು ಸಂಸ್ಥೆಗಳು ಮತ್ತು ಗ್ರಾಹಕರನ್ನು ಸಶಕ್ತಗೊಳಿಸುತ್ತದೆ ಎಂಬುದಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ, ಇದು
ಭಾರತದಲ್ಲಿ ಹೆಚ್ಚು ಸುಲಭವಾಗಿ ಮತ್ತು ಸಮಾನವಾದ ಆರ್ಥಿಕ ಪರಿಸರ ವ್ಯವಸ್ಥೆಯತ್ತ ನಮ್ಮ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ಎಂದರು.
......................