ಕರ್ಣಾಟಕ ಬ್ಯಾಂಕ್ 600 ಕೋಟಿ ರೂ. ಈಕ್ವಿಟಿ ಷೇರು ಬಂಡವಾಳ ಹಂಚಿಕೆಗೆ ಅನುಮೋದನೆ

kkkkkkkkkkk
Published on


ಮಂಗಳೂರು : ಖಾಸಗಿ ರಂಗದ ಮುಂಚೂಣಿಯ ಕರ್ಣಾಟಕ ಬ್ಯಾಂಕ್ 600 ಕೋಟಿ ರೂ.ಗಳ ಈಕ್ವಿಟಿ ಷೇರು ಬಂಡವಾಳ ಹಂಚಿಕೆಗೆ ಅನುಮೋದನೆ ನೀಡಿದೆ. ಬೆಂಗಳೂರಿನಲ್ಲಿ ನಡೆದ ಬ್ಯಾಂಕಿನ ನಿರ್ದೇಶಕರ ಮಂಡಳಿ ಸಭೆಯಲ್ಲಿ, ಅರ್ಹ ಸಾಂಸ್ಥಿಕ ನಿಯೋಜನೆಗೆ ಅನುಗುಣವಾಗಿ ಷೇರುಗಳ ಹಂಚಿಕೆಯನ್ನು ಅನುಮೋದಿಸಲಾಗಿದೆ.
ಪ್ರತಿ ಈಕ್ವಿಟಿ ಷೇರಿಗೆ 227 ರೂ. (ಪ್ರತಿ ಷೇರಿಗೆ 217.00 ರೂ. ಪ್ರೀಮಿಯಂ ಸೇರಿದಂತೆ) ಒಟ್ಟು 600 ಕೋಟಿ ರೂ.ಗಳವರೆಗೆ ಅನುಮೋದನೆ ನೀಡಲಾಯಿತು. 2023ರ ಅಕ್ಟೋಬರ್‌ನಲ್ಲಿ ಬಂಡವಾಳ ಸಂಗ್ರಹ 800 ಕೋಟಿ ರೂ. ಇದ್ದುದು, ಫೆಬ್ರವರಿ 2024 ರಲ್ಲಿ 100 ಕೋಟಿ ರೂ. ಆಗಿದೆ. ಸೆಪ್ಟೆಂಬರ್ 2023ರಲ್ಲಿ ಘೋಷಿಸಲಾದ 1,500 ಕೋಟಿ ರೂ.ಗಳ ಯೋಜಿತ ಬಂಡವಾಳ ಸಂಗ್ರಹಣೆ
ಕಾರ್ಯ ಪೂರ್ಣಗೊಂಡಿದೆ.
ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್ ಎಚ್. ಮಾತನಾಡಿ ‘ಕರ್ಣಾಟಕ ಬ್ಯಾಂಕ್‌ನ ಹೊಸ ಸಾಂಸ್ಥಿಕ ಹೂಡಿಕೆದಾರರನ್ನು ಸ್ವಾಗತಿಸುತ್ತದೆ. ಬ್ಯಾಂಕ್‌ನ ಪಯಣದಲ್ಲಿ ಅವರ ನಂಬಿಕೆ ಮತ್ತು ವಿಶ್ವಾಸಕ್ಕಾಗಿ ಧನ್ಯವಾದಗಳು. ಈ ಮೈಲಿಗಲ್ಲು 2023-24 ಸಾಲಿಗೆ ಬಂಡವಾಳ ಸಂಗ್ರಹಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೇವೆ ಎಂದರು.
ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಮಾತನಾಡಿ ‘ ತ್ರೈಮಾಸಿಕ ಅವಧಿಯಲ್ಲಿ ನಮ್ಮ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಬಂಡವಾಳದ ಹೆಚ್ಚಳ ನಮ್ಮ ಕಾರ್ಯತಂತ್ರದ ಉದ್ದೇಶಗಳೊಂದಿಗೆ ಬೆಳವಣಿಗೆ ಕಾರಣವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net