ಕರ್ನಾಟಕ ಬ್ಯಾಂಕ್ ನೂತನ ಕಚೇರಿ ಉದ್ಘಾಟನೆ

karnataka bank
Published on

ಕುಶಾಲನಗರ:

ಕುಶಾಲನಗರ ತಾಲೂಕು ಕೂಡುಮಂಗಳೂರುವಿನಲ್ಲಿ ಆರಂಭವಾಗಿರುವ ಕೂಡಿಗೆ ಕರ್ನಾಟಕ ಬ್ಯಾಂಕ್ ನೂತನ ಶಾಖಾ ಪ್ರಾಂಗಣದ ಕಚೇರಿಯನ್ನು ಎಂ. ಆರ್. ಸಿ. ಬೋಧಿಸತ್ವ ಟ್ರಸ್ಟ್ ಅಧ್ಯಕ್ಷ ಕರ್ಮ ಸ್ಯಾಮ್ಟೆನ್ಲಿಂಗ್ ರಿಂಪೋಚೆ ಮಂಗಳವಾರ ಉದ್ಘಾಟಿಸಿದರು. ನಂತರ ಮಾತಾನಾಡಿದ ಅವರು ಗ್ರಾಹಕರ ಸೇವೆ ಮಾಡುವುದರ ಮೂಲಕ ಬ್ಯಾಂಕ್‌ಗಳ ಅಭಿವೃದ್ಧಿ ಸಾಧ್ಯ ಎಂದರು.

ಕರ್ನಾಟಕ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರೂ ಆದ ವಲಯ ಅಧಿಕಾರಿ ಜಯಾನಂದ ದೇವಾಡಿಗ, ಮೈಸೂರು ಪ್ರಾದೇಶಿಕ ಕಚೇರಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡಾ. ಟಿ.ಆರ್. ಡಾ. ಅರುಣ್, ಕೂಡಿಗೆ ಬ್ಯಾಂಕ್ ಮ್ಯಾನೇಜರ್ ಕೆ.ಎಂ. ಭಾನುಪ್ರಕಾಶ್ ಬ್ಯಾಂಕ್ ಮತ್ತು ಸಾರ್ವಜನಿಕ ಸಹಭಾಗಿತ್ವ ಸೇರಿದಂತೆ ಸೇವೆ ಬಗ್ಗೆ ಮಾತಾನಾಡಿದರು.

ಈ ಸಂದರ್ಭ ವಿವಿಧ ವಿಭಾಗದ ಅಧಿಕಾರಿ ವರ್ಗದವರು, ಬ್ಯಾಂಕ್ ಗ್ರಾಹಕರು, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net