ಕುಶಾಲನಗರದಲ್ಲಿ ರಸ್ತೆ ಸಂಚಾರ ತಡೆ

29Kush07
Published on

ಕುಶಾಲನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಶುಕ್ರವಾರ ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ಸಂಚಾರ ನಡೆಸಿ ಪ್ರತಿಭಟಿಸಿದರು.

ನಗರ ಬಿಜೆಪಿ ಅಧ್ಯಕ್ಷ ವಿ.ಎನ್. ಉಮಾಶಂಕರ್ ಮಾತನಾಡಿ, ರಾಜ್ಯಾದ್ಯಂತ ಕರೆ ನೀಡಿರುವ ಬಂದ್‌ಗೆ ಕುಶಾಲನಗರದಲ್ಲಿ ನೈತಿಕ ಬೆಂಬಲ ನೀಡಲಾಗಿದೆ. ಕೆಲವರು ಸ್ವಯಂಪ್ರೇರಿತವಾಗಿ ಸಹಕಾರ ನೀಡಿ ಬಂದ್ ಮಾಡಿರುವುದು ಶ್ಲಾಘನೀಯ. ಕಾವೇರಿ ಪರ ಹೋರಾಟಕ್ಕೆ ಎಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಅಮೃತ್‌ರಾಜ್ ಮಾತನಾಡಿ, 1947ರಿಂದ ಈ ವಿಚಾರ ಚಾಲ್ತಿಯಲ್ಲಿದೆ. 68 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಇದಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ವಿಫಲವಾಗಿದೆ. ಪ್ರತಿವರ್ಷ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಈಗಲೂ ಈ ವಿಚಾರವನ್ನು ಒಳ್ಳೆಯ ರೀತಿಯಲ್ಲಿ ಕೊನೆಗಾಣಿಸಲು ಆಗುತ್ತಿಲ್ಲ ಎಂದು ಬೇಸರಿಸಿದರು.

ಬಿಜೆಪಿ ಪ್ರಮುಖರಾದ ಕೆ.ಜಿ.ಮನು, ಬಿ.ಜೈವರ್ಧನ್, ಎಂ.ಎನ್.ಕುಮಾರಪ್ಪ, ರೂಪಾ ಉಮಾಶಂಕರ್, ಎಂ.ಎಂ.ಚರಣ್, ನವನೀತ್, ಕೆ.ಎನ್.ದೇವರಾಜ್, ಮಣಿ, ಪ್ರಶಾಂತ್, ಪ್ರವೀಣ್, ಎಂ.ವಿ.ನಾರಾಯಣ್, ಸೊಸೈಟಿ ಸೋಮಶೇಖರ್, ಚಂದ್ರಶೇಖರ್ ಹೆರೂರು, ಸುಮನ್, ಸದಾಶಿವ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net