ಗೌರವ ಫೆಲೋಶಿಪ್ ಪ್ರಕಟ

New Project (22)
Published on

ಬೆಂಗಳೂರು: ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ (ಕೆಎಎಎಸ್) ನೀಡುವ ಪ್ರಸಕ್ತ ಸಾಲಿನ ಗೌರವ ಫೆಲೋಶಿಪ್‌ಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಮುಖ್ಯಸ್ಥ ಡಾ. ವಿ. ಕೆ. ಆತ್ರೆ, ಪಿಇಎಸ್ ವಿವಿ ಕುಲಾಧಿಪತಿ ಡಾ. ಎಂ. ಆರ್. ದೊರೆಸ್ವಾಮಿ ಮತ್ತು ಸಮಾಜ ಸೇವಕ ಹಾಗೂ ವಿಧಾನ ಪರಿಷತ್ತು ಮಾಜಿ ಸದಸ್ಯ ಎಸ್. ರುದ್ರೇಗೌಡ ಆವರು ಆಯ್ಕೆಯಾಗಿದ್ದಾರೆ.

ಬೆಂಗಳೂರು ವಿವಿ ವಿಜ್ಞಾನ ವೇದಿಕೆ ಸಹಯೋಗದಲ್ಲಿ ಬೆಂ. ವಿವಿಯ ಡಾ. ವೆಂಕಟಗಿರಿಗೌಡ ಸ್ಮಾರಕ ಭವನದಲ್ಲಿ ಸೆ. 11ರಂದು ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರಂಭದಲ್ಲಿ ಈ ಮೂವರು ಗಣ್ಯರಿಗೆ ಗೌರವ ಫೆಲೋಶಿಪ್ ಪ್ರದಾನ ಮಾಡಲಾಗುವುದು. ಕಾರ್ಯಕ್ರಮವನ್ನು ಬೆಂಗಳೂರು ವಿವಿ ಕುಲಪತಿ ಪ್ರೊ. ಎಸ್.ಎಂ. ಜಯಕರ್ ಉದ್ಘಾಟಿಸಲಿದ್ದು, ವಿಜ್ಞಾನ ವಿಭಾಗದ ಡೀನ್ ಡಾ. ಅಶೋಕ್ ಹಂಜಗಿ ಇತರರು ಭಾಗವಹಿಸಲಿದ್ದಾರೆ ಎಂದು ಕೆಎಎಎಸ್ ಅಧ್ಯಕ್ಷ ಡಾ. ಕೆ. ಸಿದ್ದಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net